ನೇಣು ಹಾಕಿಕೊಂಡು ಯುವಕ ಆತ್ಮಹತ್ಯೆ

ಕಲಬುರಗಿ,ಡಿ.29-ನೇಣು ಹಾಕಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂದಗಿ (ಬಿ) ಗ್ರಾಮದಲ್ಲಿ ನಡೆದಿದೆ.
ಶ್ರೀಶೈಲ ಅಂಬಾರಾಯ ಗೌಡಗಾಂವ ಆತ್ಮಹತ್ಯೆ ಮಾಡಿಕೊಂಡ ಯುವಕ.
ಶ್ರೀಶೈಲ ಖಾಸಗಿಯಾಗಿ ಸಾಲ ಮಾಡಿಕೊಂಡಿದ್ದ. ಹೀಗಾಗಿ ಆತ ಮಾಡಿದ್ದ ಸಾಲ ತೀರಿಸಲು ಅವರ ತಂದೆ ಅಂಬಾರಾಯ ಅವರು ಶ್ರೀಶೈಲ ಪಾಲಿಗೆ ಬಂದಿದ್ದ ಹೊಲವನ್ನು ಮಾಡಿ ಹಣ ಕೊಟ್ಟಿದ್ದರು. ಇಷ್ಟಾಗಿಯೂ ಶ್ರೀಶೈಲ ಇನ್ನೂ ಒಂದು ಲಕ್ಷ ರೂ.ಕೊಡುವಂತೆ ಅವರ ತಂದೆಯನ್ನು ಕೇಳಿದ್ದ. ಅವರು ಮೊದಲೇ ಹೊಲ ಮಾರಿ ಹಣ ಕೊಟ್ಟಿದ್ದು, ಈಗ ನನ್ನ ಬಳಿ ಹಣ ಇಲ್ಲ ಎಂದುದಕ್ಕೆ ನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.