ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ

ಚಿಟಗುಪ್ಪ,ಮಾ.14-ವಿವಾಹಿತ ಮಹಿಳೆ ಮನೆಯಲ್ಲಿ ಯಾರು ಇಲ್ಲದಾಗ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಬೇಮಳಖೇಡ ಪೆÇಲೀಸ್ ಠಾಣಾ ವ್ಯಾಪ್ತಿಯ ಮೊಗದಳ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ ಜರುಗಿದೆ.
ಮೃತಪಟ್ಟ ಮಹಿಳೆಯನ್ನು ಅಶ್ವಿನಿ ನಾಗಶೆಟ್ಟಿ ( 23) ಎಂದು ಗುರುತಿಸಲಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆ ತಾಲೂಕಿನ ಮನ್ನಾಎಖೇಳಿ ಗ್ರಾಮದ ನಾಗಶೆಟ್ಟಿ ಎಂಬುವವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಒಂದುವರೆ ವರ್ಷದ ಹಿಂದೆ ದಂಪತಿಗಳಿಬ್ಬರು ಮೊಗದಾಳ ಗ್ರಾಮದಲ್ಲಿಯೇ ಪ್ರತ್ಯೇಕ ಮನೆ ಮಾಡಿ ವಾಸಿಸುತ್ತಿದ್ದರು ಎನ್ನಲಾಗುತ್ತಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಬೇಮಳಖೇಡಾ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ