ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ

ವಿಜಯಪುರ,ನ.20-ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟದಲ್ಲಿರುವ ಆಕ್ಸಫರ್ಡ ಎಕ್ಸಫರ್ಟ ವಸತಿ ಸಹಿತ ಪಿಯು ಕಾಲೇಜಿನ ಹಾಸ್ಟೇಲ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿದೆ.
ಅಜಯಕುಮಾರ ನುಚ್ಚಿ (17) ಮೃತ ವಿದ್ಯಾರ್ಥಿ.
ವಿಜಯಪುರ ನಗರ ಮೂಲದ ವಿದ್ಯಾರ್ಥಿ ಅಜಯಕುಮಾರ ಸಾವಿನ ಬಗ್ಗೆ ಅವರ ಪೋಷಕರು ಸಂಶಯ ವ್ಯಕ್ತಪಡಿಸಿದ್ದಾರೆ.
ಒಂದು ವಾರದ ಹಿಂದೆ ಅಜಯಕುಮಾರ ಶ್ರೀ ದತ್ತಾತ್ರೇಯ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಜಿ.ಹಿರೇಮಠ ಪುತ್ರನೊಂದಿಗೆ ಜಗಳವಾಡಿದ್ದ ಎನ್ನಲಾಗಿದ್ದು, ಬಳಿಕ ಅಜಯಕುಮಾರ ಪೋಷಕರು ಕಾಲೇಜಿಗೆ ತೆರಳಿ ಮಗನನ್ನು ಭೇಟಿಯಾಗಿ ಬಂದಿದ್ದರು ಎನ್ನಲಾಗಿದೆ.
ಇಂದು ನಸುಕಿನಜಾವ ಕಾಲೇಜಿನ ಸಿಬ್ಬಂದಿ ಅಜಯಕುಮಾರ ನೇಣು ಹಾಕಿಕೊಂಡಿದ್ದಾಗಿ ತಿಳಿಸಿದ್ದು, ತಮ್ಮ ಮಗನ ಸಾವಿನಲ್ಲಿ ಸಂಶಯವಿದೆ ಎಂದು ಅಜಯಕುಮಾರ ಪೋಷಕರು ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ.
ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.