ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ

ಅಥಣಿ: ಮಾ.19:ಕಾಲೇಜ ವಿದ್ಯಾರ್ಥಿಯೋರ್ವ ಮರಕ್ಕೆ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ತಾಲೂಕಿನ ತಾಂವಶಿ ಗ್ರಾಮದ “ಆಕಾಶ ಮಹಾದೇವ ಮಿರ್ಜಿ” (22) ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಬಿ ಕಾಂ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿದ್ದ ಈ ವಿದ್ಯಾರ್ಥಿ ತಾಂವಶಿ ಗ್ರಾಮದ ಮಹಾದೇವ ಮಿರ್ಜಿ ಅವರಿಗೆ ಒಬ್ಬನೇ ಮಗನಾಗಿದ್ದು, ತಂದೆ ಮಹಾದೇವ ಮಿರ್ಜಿ ಮೂರು ವರ್ಷದ ಹಿಂದೆ ಆಕಸ್ಮಿಕವಾಗಿ ಹೃದಯಾಘಾತದಿಂದ ನಿಧನ ಹೊಂದಿದ್ದು, ಕುಟುಂಬ ನಿಭಾಯಿಸುವ ಜವಾಬ್ದಾರಿ ಆಕಾಶ ಈತನ ಮೇಲೆತ್ತು. ಆಗ ಗಂಡನನ್ನು ಮತ್ತು ಈಗ ಮಗನನ್ನು ಕಳೆದುಕೊಂಡ ಮೃತ ಆಕಾಶ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ

ಅಥಣಿ ಪೆÇಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಥಣಿ ಪೆÇಲೀಸರು ಪ್ರಕರಣದ ಕಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಯುವಕನ ಸಾವಿಗೆ ಕಾರಣ ಇನ್ನು ತಿಳಿದು ಬರಬೇಕಾಗಿದೆ.