ನೇಣು ಬಿಗಿದುಕೊಂಡು ಹೆಡ್ ಕಾನ್ಸಟೇಬಲ್ ಆತ್ಮಹತ್ಯೆ

ಕಲಬುರಗಿ,ಮೇ.22-ನಗರದ ಡಿಎಆರ್ ಹೆಡ್ ಕ್ವಾರ್ಟರ್ಸ್‍ನಲ್ಲಿ ನೇಣು ಬಿಗಿದುಕೊಂಡು ಹೆಡ್ ಕಾನ್ಸಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪಾಂಡುರಂಗ (47) ಆತ್ಮಹತ್ಯೆಗೆ ಮಾಡಿಕೊಂಡ ರ್ದುದೈವಿ.
ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ್ ಗ್ರಾಮದ ನಿವಾಸಿ ಪಾಂಡುರಂಗ ಅವರು ನಗರದ ಬ್ರಹ್ಮಪುರ ಪೆÇಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೇ.20 ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಮನೆಗೆ ತೆರಳಿದ್ದರು. ಶಕೆ ಇದೆ ಎಂದು ಇಬ್ಬರು ಮಕ್ಕಳು ಮನೆಯ ಮೇಲ್ಛಾವಣಿಯಲ್ಲಿ ಮಲಗಿದ್ದು, ಗಂಡ ಹೆಂಡತಿ ಇಬ್ಬರು ಕ್ವಾಟರ್ಸ್‍ನ ಬೆಡ್ ರೂಮ್‍ನಲ್ಲಿ ಮಲಗಿದ್ದರು. ನಸುಕಿನ ಜಾವ ಮನೆಯ ಅಡುಗೆ ಕೊಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಸ್ಟೇಷನ್ ಬಜಾರ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.