ನೇಗಿನಹಾಳ ಶ್ರೀ ಆತ್ಮಹತ್ಯೆ: ಇಬ್ಬರು ಮಹಿಳೆಯರ ಬಂಧನಕ್ಕೆ ಆಗ್ರಹ

ಬೀದರ್,ಸೆ.6-ಬೆಳಗಾವಿ ಜಿಲ್ಲೆಯ ಬೈ¯ಹೊಂಗಲ ತಾಲ್ಲೂಕಿನ ನೇಗಿನಹಾಳ ಗ್ರಾಮದ ಶ್ರೀಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಮಹಾಸ್ವಾಮಿಳ ಆತ್ಮಹತ್ಯೆಗೆ ಕಾರಣರಾದ ಆ ಇಬ್ಬರು ಮಹಿಳೆಯರನ್ನು ಕೂಡಲೇ ಬಂಧಿಸಬೇಕು ಎಂದು ಶ್ರೀ ವೀರಭದ್ರ ಸೇನೆಯ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ ಕರಂಜಿ ಆಗ್ರಹಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಲಿಂಗಾಯತ ಸಮುದಾಯದ ಮಠಾಧೀಶರ ಮೇಲೆ ನಡೆಯುತ್ತಿರುವ ತೇಜೋವಧೆಯನ್ನು ಸೇನೆ ಉಗ್ರವಾಗಿ ಖಂಡಿಸುತ್ತದೆ ಎಂದರು.
ರಮೇಶ ಜಾರಕಿಹೊಳಿ ಅವರಂತಹ ಪ್ರಭಾವಿ ನಾಯಕರ ಲೈಂಗಿಕ ಪ್ರಕರಣಗಳು ಸಾಮಾಜಿಕ ಜಾಲತಾಣದಲ್ಲಿ ಹೊರ ಬಂದರೂ ಅದನ್ನು ಗಂಭೀರವಾಗಿ ಪರಿಗಣಿಸದ ಈ ಸರ್ಕಾರ ಮುಗ್ಧ ಮಠಾಧೀಶರನ್ನು ಟಾರ್ಗೇಟ್ ಮಾಡುತ್ತಿರುವ ದುಷ್ಟಶಕ್ತಿಗಳ ವಿರುದ್ಧ ಕ್ರಮ ಜರುಗಿಸಲು ಹಿಂಜರಿಯುತ್ತಿದೆ ಎಂದು ಜರಿದರು.
ಈ ಕೂಡಲೇ ಸ್ವಾಮೀಜಿಗಳ ಮೇಲೆ ನಡೆಯುತ್ತಿರು ದೌರ್ಜನ್ಯ ಹಾಗೂ ತೇಜೋವಧೆ ನಿಲ್ಲದಿದ್ದರೆ ವೀರಭದ್ರ ಸೇನೆ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಸಮಾಜ ಸೇವಕ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಾಜಶೇಖರ ನಾಗಮೂರ್ತಿ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.