ನೇಕಾರ ಸಮುದಾಯಕ್ಕೆ ಸರ್ಕಾರ ಪ್ಯಾಕೇಜ್ ಘೋಷಿಸಲಿ

ಹರಿಹರ ಮೇ 27; ಕೊರೊನಾ ವೈರಸ್ ನಿಂದ ಸಂಕಷ್ಟಕ್ಕೆ ಸಿಲುಕಿದ  ಸಮುದಾಯಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಹಾಯ ಧನ ನೀಡುವಂತೆ ನೇಕಾರ  ಸಮುದಾಯಗಳ ಒಕ್ಕೂಟದಿಂದ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು
ಎರಡನೆಯ ಹಂತದ ವೈರಸ್  ಅಲೆ ಲಾಕ್ ಡೌನ್ ನಿಂದ  ಸಮುದಾಯದವರು ಸಂಕಷ್ಟಕ್ಕೆ ಸಿಲುಕಿದ್ದಾರೆ  ರಾಜ್ಯ ಸರ್ಕಾರವು ಈಗಾಗಲೇ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದ್ದು ಆರ್ಥಿಕವಾಗಿ ಹಿಂದುಳಿದ ವರ್ಗವಾಗಿದ್ದು ನೇಕಾರ ಸಮಾಜದ ಬಂಧುಗಳು ಕೂಡಲೇ ಆರ್ಥಿಕ ನೆರವು ಪ್ಯಾಕೇಜನ್ನು ಘೋಷಣೆ ಮಾಡಬೇಕೆಂದು ಆಗ್ರಹಿಸಿ ತಹಸಿಲ್ದಾರ್ ಕೆ ಬಿರಾಮಚಂದ್ರಪ್ಪ ಅವರಿಗೆ ಮನವಿಯನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ನೇಕಾರ ಸಮುದಾಯಗಳ ಅಧ್ಯಕ್ಷರಾದ ಪ್ರಕಾಶ್ ಕೋಳೂರು, ಸಮುದಾಯದ ಪದಾಧಿಕಾರಿಗಳಾದ ಕೊಟ್ರಪ್ಪ ಕೊಟಗಿ, ರಾಜು ರೋಖಡೆ. ಮಹದೇವಪ್ಪ ರೋಖಡೆ, ಮಾಲತೇಶ ಭಂಡಾರಿ, ಮಲ್ಲಿಕಾರ್ಜುನ ದೇವಾಂಗದ, ರಂಗಪ್ಪ ಡಿಹೆಚ್, ಹನುಮಂತಪ್ಪ ಗುತ್ತಲ್, ಗಂಗಾಧರ ಕೊಟಗಿ, ಹನುಮಂತರಾವ್ ,  ಷಣ್ಮುಖ, ರಾಜಣ್ಣ ಅಗಡಿ ,ಮಂಜುನಾಥ್ ಅಗಡಿ ,  ಇತರರಿದ್ದರು.