ನೇಕಾರ ನಿಗಮಕ್ಕೆ ಹೆಚ್ಚಿನ ಅನುದಾನ: ಶಾಸಕ ಅಲ್ಲಮಪ್ರಭು ಭರವಸೆ

ಕಲಬುರಗಿ,ಆ.8- ನೇಕಾರ ಸಮಾಜದ ಅಮಗ್ರ ಅಭಿವೃದ್ಧಿಗಾಗಿ ಸ್ಥಾಪಿಸಿರುವ ನಿಗಮಕ್ಕೆ ಸರ್ಕಾರದಿಂದ ಹೆಚಚಿನ ಅನುದಾನ ಕೊಡಿಸುವುದರ ಜೊತೆಗೆ ನಗರದಲ್ಲಿ ನೇಕಾರ ಭವನ ನಿರ್ಮಿಸಲು ಒತ್ತು ನೀಡಲಾಗುವುದು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಭರವಸೆ ನೀಡಿದರು.
ನಗರದ ಕನ್ನಡ ಭವನದಲ್ಲಿ ಸೋಮವಾರ ಸಂಜೆ ಸಪ್ತ ನೇಕಾರರ ಸೇವಾ ಸಂಘ(ಪಟ್ಟಸಾಲಿ, ಹಟಗಾರ, ಕುರುಹಿನಶೆಟ್ಟಿ, ಸ್ವಕುಳಿಸಾಲಿ, ತೊಗಟವೀರ ಕ್ಷತ್ರೀಯ, ದೇವಾಂಗ)ಹಮ್ಮಿಕೊಂಡಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ, ಸಮಾಜದ ಪ್ರತಿಭಾಚಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ನವ ಕಲ್ಯಾಣ ಕರ್ನಾಟಕ ತೊಗಟವೀರ ಕ್ಷರ್ತೀಯ ಸಮಾಜ ಸೇವಾ ಸಂಘದ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಉದ್ಘಟಿಸಿ ಮಾತನಾಡಿದರು.
ನಿಗಮಕ್ಕೆ ಸಮಾಜದವರ ಬೇಡಿಕೆಯಂತೆ ಅನುದಾನ ಕೊಡಿಸುವ ಮೂಲಕ ಎಲ್ಲ ತೆರನಾದ ಪ್ರಗತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ಈ ಕುರಿತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುದಾನಕ್ಕಾಗಿ ಕೋರುವೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ,ಖ್ಯಾತ ವೈದ್ಯ ಡಾ.ಪ್ರಕಾಶ ಹಾದಿಮನಿ ಮಾತನಾಡಿ, ಶಿಕ್ಷಣ ಕಲಿಕೆ ಬಹುಮುಖ್ಯವಾಗಿದೆ.
ಹಿಗಾಗಿ ಎಲ್ಲ ಪಾಲಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕೆಂದು ಹೇಳಿದರು.
ಸಮಾರಂಭದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಶಾಲು ಹೊದಿಸಿ ಸತ್ಕರಿಸಲಾಯಿತು.
ಪಟ್ಟಸಾಲಿ ಸಮಾಜದ ಅಧ್ಯಕ್ಷ ಮಡಿವಾಳಪ್ಪ ಹತ್ತೂರೆ, ಪದ್ಮಸಾಲಿ ಸಮಾಜದ ಅಧ್ಯಕ್ಷ ರಂಗನಾಥಬಾಬು ಚನ್ನಾ, ಸ್ಚಕುಳಸಾಲಿ ಸಮಾಜದ ಅಧ್ಯಕ್ಷ ನಾರಾಯಣರಾವ ಸಿಂಗಾಡೆ, ಹಟಗಾರ ಸಮಾಜದ ಅಧಯಕ್ಷ ಚೆನ್ನಬಸಪ್ಪ ನಿಂಬೆಣಿ, ಕುರುಹುನಶೆಟ್ಟಿ ಸಮಾಜದ ಅಧ್ಯಕ್ಷ ಬಸವರಾಜ ಕರದಳ್ಳಿ, ತೋಗಟವೀರ ಸಮಾಜದ ಅಧ್ಯಕ್ಷ ಶ್ರೀನಿವಾಸ ಬಲಪುರ,ದೇವಾಂಗ ಸಮಾಜದ ಅಧ್ಯಕ್ಷ ಹಣಮಂತ ಕಣ್ಣಿ,, ಪ್ರಮುಖರಾದ ಚಂದ್ರಶೇಖರ ಮ್ಯಾಳಗಿ,ಸಂತೋಷ ಗುರುಮಿಠಕಲ್, ರಾಜಗೋಪಾಲ ಭಂಡಾರಿ, ರೇವಣಸಿದ್ದಪ್ಪ ಗಡ್ಡದ,ವಿಜಯಕುಮಾರ ತ್ತಿವೇದಿ,,ರಾಹುಲ್ ಕೋಷ್ಠಿ,ಶೋಭಾರಾಣಿ ಕೋರವಾರ, ಸುಜಾತಾ ಅಕ್ಕಾ, ಗೀತಾಂಜಲಿ ಮೈನಾಳೆ , ನಿರ್ಮಲಾ ಗುಡ್ಡದ ಮತ್ತಿತರರು ಸಪ್ತ ನೇಕಾರರ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನ್ಯಾಯವಾದಿ ವಿನೋದಕುಮಾರ ಜನೇವರಿ ನಿರೂಪಣೆ ಮಾಡಿದರು.ಕೈಮಗ್ಗ ರಾಷ್ಟ್ರೀಯ ಪ್ರಶಸ್ತಿ ಪುರಸ್ರøತೆ ಪಾರ್ವತಿ ಭೀಮಣ್ಣ ನಾಗಠಾಣ ವೇದಿಕೆ ಮೇಲೆ
ಉಪಸ್ಥಿತರಿದ್ದರು.