ನೇಕಾರ ಕುಟುಂಬಕ್ಕೆ ೧೦ ಸಾವಿರ ಪರಿಹಾರ ನೀಡಲು ಒತ್ತಾಯ

ಲಿಂಗಸುಗೂರು.ಮೇ.೩೦-ಮಹಾಮ್ಮಾರಿ ಕರೋನ ೧೯ ರಿಂದ ಸಂಕಷ್ಟದಲ್ಲಿರುವ ನೇಕಾರ ಕುಟುಬಕ್ಕೆ ೧೦ ಸಾವಿರ ಪರಿಹಾರ ಧನ ನೀಡಬೇಕೆಂದು ತಾಲೂಕ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಶ್ರೀಧರ ಎಸ್.ಕಿರಗಿ ಒತ್ತಾಯಿಸಿದರು.
ಸ್ಥಳಿಯ ಕಾರ್ಯನಿರತ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿರುವ ನೇಕಾರ ಕುಟುಂಬಗಳು ಕೋವಿಡ ೧೯ ರ ಲಾಕ್‌ಡೌನ್‌ದಿಂದ ನೇಕಾರರ ಕುಟುಂಬಗಳ ಬದುಕು ಅತಂತ್ರವಾಗಿದೆ ಸುಮಾರು ೧.೨೫ ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಸಮಾಜಕ್ಕೆ ಹತ್ತುಸಾವಿರ ಪರಿಹಾರ ಧನ ನೀಡಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಧರ ಎಸ್.ಕಿರಗಿ, ಮಲ್ಲಿಕಾರ್ಜುನ ವೀರಾಪೂರು, ರಾಚಪ್ಪ ಕತ್ತಿಕೈ, ರಮೇಶ ಯಂಗಾಲಿ, ಟಿ.ರಮೇಶ, ನಾರಾಯಣ ಕೊಪ್ಪರದ, ಸಿದ್ದರಾಯ ರುದ್ರಗಂಟಿ, ಅಮರೇಶ ಕಂಪ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.