ನೇಕಾರರ ಬೇಡಿಕೆ ಈಡೇರಿಸಲು ಆಗ್ರಹ

ಕೋಲಾರ,ಡಿ,೨೯:ನೇಕಾರರ ಅಭಿವೃದ್ದಿ ನಿಗಮ ಕಾರ್ಯಕ್ರಮಕ್ಕೆ ಕ್ರಮ ಜರುಗಿಸಲು ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಘಟಕವು ಸರ್ಕಾರಕ್ಕೆ ಆಗ್ರಹ ಪಡೆಸಿದೆ ಎಂದು ಜಿಲ್ಲಾಧ್ಯಕ್ಷ ಎಂ.ವಿ.ರವೀಂದ್ರ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ನೇಕಾರ ಸಮುದಾಯವು ೬೦ ಲಕ್ಷ ಜನಸಂಖ್ಯೆ ಹೊಂದಿದೆ. ೪೯ ಉಪಪಂಗಡಗಳಿವೆ, ಜಿಲ್ಲೆಯಲ್ಲಿ ೩೫-೪೦ ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಶೈಕ್ಷಣಿಕವಾಗಿ. ಔಧ್ಯೋಗಿಕವಾಗಿ,ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಬಲವರ್ಧನೆಗಾಗಿ ಹಿಂದಿನ ಸರ್ಕಾರ ನೇಕಾರರ ಅಭಿವೃದ್ದಿ ನಿಗಮವನ್ನು ಸ್ಥಾಪಿಸಲಾಗಿದೆ ಎಂದರು.
ರಾಜ್ಯದಲ್ಲಿ ಆಡಳಿತರೊಢ ಸರ್ಕಾರವು ನಿಗಮದ ಕಾರ್ಯಕ್ರಮಗಳ ಚಟುವಟಿಕೆಗಳಿಗೆ ಚಾಲನೆ ನೀಡಲು ಮೀನಾಮೇಷ ಎಣಿಸುತ್ತಿರುವುದು ಸಮುದಾಯದವರಿಗೆ ಭಾರಿ ನಿರಾಶೆ ಉಂಟು ಮಾಡುತ್ತಿದೆ ಹಾಗಾಗಿ ಸರ್ಕಾರವು ನೇಕಾರರ ಅಭಿವೃದ್ದಿ ನಿಗಮದತ್ತ ಸರ್ಕಾರ ಗಮನ ಹರಿಸ ಬೇಕೆಂದು ಮನವಿ ಮಾಡಿದರು.
ಮುಂದಿನ ಫ್ರಬ್ರವರಿ ಮಾಹೆಯಲ್ಲಿ ಬಾಗಲಕೋಟೆಯಲ್ಲಿ ನೇಕಾರರ ಸಮಾವೇಶವನ್ನು ಆಯೋಜಿಸುವ ಮೂಲಕ ಸರ್ಕಾರಕ್ಕೆ ಸಮುದಾಯ ಶಕ್ತಿಯನ್ನು ಪ್ರದರ್ಶನ ಮಾಡಲು ಒಕ್ಕೂಟ ಚಿಂತಿಸಲಾಗಿದೆ ಎಂದರು.
ಈ ಸಮಾವೇಶಕ್ಕೆ ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ಸೇರಿದಂತೆ ಇತರೆ ಸಚಿವರನ್ನು ಆಹ್ವಾನಿಸಲಾಗುವುದು, ಈ ಸಮಾವೇಶಕ್ಕೆ ನಮ್ಮ ಜಿಲ್ಲೆಯೂ ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಸಮುದಾಯದವರು ಬಾಗಲಕೋಟೆಗೆ ತೆರಳಲಿದ್ದಾರೆ ಎಂದರು,
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ ಜಾತಿ ಗಣತಿ ಸಮೀಕ್ಷೆ ಮಾಡಿದ್ದರೂ ಸಹ ಈವರೆಗೆ ಜಾರಿಗೊಳಿಸಿಲ್ಲ. ಜಾತಿಗಣತಿಯನ್ನು ಸ್ವೀಕರಿಸ ಬೇಕೆಂದು ಸರ್ಕಾರಕ್ಕೆ ಆಗ್ರಹ ಪಡೆಸಿದರು
ಗೌರವ ಅಧ್ಯಕ್ಷರಾದ ಎಂ.ಎನ್.ಗುಂಡಪ್ಪ ಮಾತನಾಡಿ ಸರ್ಕಾರವು ಕಳೆದ ೧೦ ವರ್ಷಗಳಿಂದ ದೇವರ ದಾಸಿಮಯ್ಯ ದಿನಾಚರಣೆಯನ್ನು ಆಚರಿಸುತ್ತಿದೆ ಅದರೆ ನಿಗಮ ಮಂಡಳಿಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ.
ನೇಕರರಾಗಿ ಸಂಬಂಧಿಸಿದಂತೆ ೪ ನಿಗಮಗಳನ್ನು ಸ್ಥಾಪಿಸಿದ್ದರು ಸಹ ಅಭಿವೃದ್ದಿ ಮಾತ್ರ ಮಾಡುತ್ತಿಲ್ಲ. ಜಾತಿ ಗಣತಿ ಮೂಲಕ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುತ್ತದೆ ಎಂಬ ಆಶಯವನ್ನು ಒಕ್ಕೂಟ ಹೊಂದಿದೆ ಎಂದು ತಿಳಿಸಿದರು,
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅರವಿಂದಮೌರ್ಯ, ಅಂಬರೀಷ್,ಮಂಜುನಾಥ್,ಮೋಹನ್ ಕೃಷ್ಣ ,ಎಂ.ಎನ್.ವೆಂಕಟೇಶ್ ಉಪಸ್ಥಿತರಿದ್ದರು,