ನೇಕಾರರಿಗೆ ಪ್ಯಾಕೇಜ್ ಘೋಷಿಸುವಂತೆ ಒತ್ತಾಯ

ಕೊಟ್ಟೂರು ಮೇ 30 : ಲಾಕ್ ಡೌನ್‌ನಿಂದ ಕೆಲಸವಿಲ್ಲದೆ ನೇಕಾರರ ಬದುಕು ಸಂಕಷ್ಟದಲ್ಲಿದ್ದು, ನೇಕಾರರಿಗೆ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಇಲ್ಲಿನ ನೇಕಾರ ‌ಸಂಘದ ಆದ್ಯಕ್ಷ ಬನ್ನಿಹಟ್ಟಿ ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಜವಳಿ ಖಾತೆ ಸಚಿವ ಶ್ರೀಮಂತ ಗೌಡ ಪಾಟೀಲ್ ಅವರಿಗೆ ಪತ್ರದ ಮುಖೇನ ಮನವಿ ಮಾಡಿದ್ದಾರೆ.
ಈಗಿನ ಕೊರೊನಾ ಕಾಯಿಲೆಯಿಂದ ಕೆಲಸವಿಲ್ಲದೆ ನಾವುಗಳು ಅರೆ ಹೊಟ್ಟೆಯಲ್ಲಿ ಬದುಕುವಂತ ಸ್ಥಿತಿ ನಿರ್ಮಾಣವಾಗಿದ್ದು, ಕಳೆದ ಬಾರಿಯ ಪ್ಯಾಕೇಜ್ ನಲಿ ಕೆಲ ನೇಕಾರರ ಕುಟುಂಬಗಳಿಗೆ ಮಾತ್ರ 2000 ರೂ ಸಂದಾಯವಾಗಿದ್ದು, ಈ ಬಾರಿಯ ಪ್ಯಾಕೇಜ್ ನಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ, ರಾಜ್ಯದ ಜನತೆಯ ಮಾನ ಮುಚ್ಚುವ ನೇಕಾರರ ಬದುಕು ಬೆತ್ತಲಾಗಿದೆ ಈ ನಿಟ್ಟಿನಲ್ಲಿ ಈ ಬಾರಿ ನೇಕಾರರ ಕುಟುಂಬಗಳಿಗೆ 5000 ಪರಿಹಾರ ವಿತರಿಸುವಂತೆ ಅವರು ಕೋರಿದ್ದಾರೆ