ನೇಕಾರರಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಗುಳೇದಗುಡ್ಡ ಮೇ.27- ಕೋವಿಡ ಪರಿಹಾರ ಪ್ಯಾಕೇಜದಲ್ಲಿ ಶ್ರಮಿಕ ವರ್ಗದ ನೇಕಾರರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಬಾಗಲಕೋಟೆ ಜಿಲ್ಲಾ ನೇಕಾರ ಸಹಕಾರಿ ಸಂಘಗಳ ಮಹಾಮಂಡಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಕೆಎಚ್‍ಡಿಸಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿ, ರಾಜ್ಯ ಸರ್ಕಾರ ಎಲ್ಲ ವರ್ಗಗಳ ಶ್ರಮಿಕರಿಗೆ ಕೋವಿಡ ಸಂಕಷ್ಟದಲ್ಲಿ ಪರಿಹಾರ ಘೋಷಿಸಿದ್ದು ಸ್ವಾಗತಾರ್ಹವಾಗಿದ್ದು ಆದರೆ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ನೇಕಾರರನ್ನು ಕಡೆಗಣಿಸಿ ಪ್ಯಾಕೇಜ ಘೋಷಣೆ ಮಾಡಿದ್ದು ಸರಿಯಲ್ಲ ಮತ್ತು ನೆರೆಹಾವಳಿಯಲ್ಲಿ ಹಾಗೂ ಕಳೆದ ವರ್ಷ ಕೋವಿಡ ವಾರಿಯರ್ಸಗೆ ನೇಕಾರರು ನೇಯ್ದ ಎಲ್ಲ ಸೀರೆಗಳನ್ನು ಸರ್ಕಾರ ಖರೀದಿ ಮಾಡಿ ಹಂಚಲಾಗುವುದು ಎಂದು ಹೇಳಿದ್ದು ಸಹ ಕಾರ್ಯರೂಪಕ್ಕೆ ಬರಲಿಲ್ಲ 2-3 ವರ್ಷಗಳು ನೇಕಾರರಿಗೆ ಸರಿಯಾದ ಕಚ್ಚಾಮಾಲುಗಳು ಪೂರೈಸುತ್ತಿಲ್ಲ ಮತ್ತು ನೇಕಾರರು ತಯಾರಿಸಿದ ಪಕ್ಕಾ ಮಾಲುಗಳು ಮಾರಟವಾಗದೆ ನೇಕಾರನು ಬಹಳ ಸಂಕಷ್ಟದಲ್ಲಿ ಸಿಲುಕಿದ್ದು ರಾಜ್ಯದ ಸಮಗ್ರ ನೇಕಾರರಿಗೆ ಕೂಡಲೆ ಕನಿಷ್ಟ ನೇಕಾರ ಸಮ್ಮಾನ್ ಯೋಜನೆ ಅಡಿ ತುರ್ತಾಗಿ 3 ತಿಂಗಳ ಮಟ್ಟಿಗೆ ಪ್ರತಿ ಕುಟುಂಬಕ್ಕೆ 5 ಸಾವಿರ ರೂ, ನೆರವು ನೀಡಬೇಕು ಎಂದರು.
ನೇಕಾರ ಸಮ್ಮಾನ ಯೋಜನೆ 2000ರಿಂದ 5000 ಸಾವಿರ,ರೂ ರವರಗೆ ಸಮಗ್ರ ನೇಕಾರರಿಗೆ ಹೆಚ್ಚಿಸಬೇಕು,ವಿದ್ಯುತ ಚಾಲಿತ ನೇಕಾರರಿಗೆ ಉಚಿತ ವಿದ್ಯುತ ನೀಡಬೇಕು,ಶೂನ್ಯ ಬಡ್ಡಿದರದಲ್ಲಿ ಸಾಲ ಕನಿಷ್ಟ 5ಲಕ್ಷಗಳವರೆಗೆ ಸಾಲ ನೀಡಬೇಕು,ಕೈಮಗ್ಗ ನೇಕಾರರಿಗೆ ಸಹಕಾರ ಸಂಘಗಳಿಂದ ಉತ್ಪಾದಿಸಿ ಪಕ್ಕಾ ಮಾಲುಗಳ ಮೇಲೆ ನೀಡುವ ರಿಯಾಯತಿ ಶೇ.20 ರಿಂದ ಶೇ. 30 ರವರೆಗೆ ಹೆಚ್ಚಿಸಬೇಕು,ಕೂಲಿ ನೇಕಾರರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ತರುವಂತಾಗಬೇಕು ಎಂದು ಮನವಿ ಮೂಲಕ ರವೀಂದ್ರ ಕಲಬುರ್ಗಿ ಒತ್ತಾಯಿಸಿದರು.
ಬಾಗಲಕೋಟೆ ಜಿಲ್ಲಾ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಖ್ಯಾತ ವೈದ್ಯ ಎಂ.ಎಸ್.ದಡ್ಡೆನವರ, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ಅಧ್ಯಕ್ಷ ಶ್ರೀನಿವಾಸ ಬಳ್ಳಾರಿ, ಇಳಕಲ್ ಅರ್ಬನ್ ಬ್ಯಾಂಕ್ ಅಧ್ಯಕ್ಷ ಲಕ್ಷಣ ಗುರಂ, ಜಿಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ಚಳ್ಳಗಿಡದ, ಜಿಲ್ಲಾ ನೇಕಾರ ಸಹಕಾರ ಸಂಘಗಳ ಮಹಾಮಂಡಳ ಅದ್ಯಕ್ಷ ವಿಷ್ಣು ಗೌಡರ, ನೇಕಾರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶಿವಲಿಂಗ ಟಿರಕಿ, ನೂಲಿನ ಗಿರಣಿ ಮಹಾಮಮಂಡಳ ಉಪಾಧ್ಯಕ್ಷ ರಾಜಶೇಖರ ಸೋರಗಾವಿ, ನೇಕಾರ ಧುರೀಣ ಆರ್.ಜೆ. ರಾಮದುರ್ಗ, ರವೀಂದ್ರ ರಾಮದುರ್ಗ, ದುಂಡಪ್ಪ ಮಾಚಕನೂರ ಸೇರಿದಂತೆ ಮತ್ತಿತರರಿದ್ದರು.