ನೆಹರೂ ಹಾಕಿದ ಹೆಜ್ಜೆ ಎಲ್ಲರಿಗೂ ಪ್ರೇರಣೆ

ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ೫೯ನೇ ಪುಣ್ಯತಿಥಿ ಪ್ರಯುಕ್ತ ವಿಧಾನಸೌಧದ ಆವರಣದಲ್ಲಿರುವ ನೆಹರೂ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು. ಸಚಿವ ಕೆ.ಎಚ್. ಮುನಿಯಪ್ಪ ಇದ್ದಾರೆ.

ಬೆಂಗಳೂರು,ಮೇ೨೭:ದೇಶದ ಮೊದಲ ಪ್ರಧಾನಿಯಾದ ಜವಹರಲಾಲ್ ನೆಹರೂರವರು ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನಗಳನ್ನು ನಾವು ಸ್ಮರಿಸಬೇಕು, ಅವರು ನಮ್ಮೆಲ್ಲರಿಗೂ ಸ್ಫೂರ್ತಿ, ಅವರು ಹಾಕಿದ ಹೆಜ್ಜೆಗಳು ನಮಗೆಲ್ಲ ಪ್ರೇರಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸ್ವಾತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರುರವರ ೫೯ನೇಯ ಪುಣ್ಯಸ್ಮರಣೆಯ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ನೆಹರುರವರು ಮಹಾನ್ ಪ್ರಜಾಪ್ರಭುತ್ಬವಾದಿಎಂದು ಬಣ್ಣಿಸಿದರು. ನೆಹರೂರವರು ದೇಶದ ಪ್ರಧಾನಿಯಾಗಿ ೧೭ ವರ್ಷಗಳ ಕಾಲ ಆಡಳಿತ ನಡೆಸಿ ಆಧುನಿಕ ಭಾರತದ ನಿರ್ಮಾಣಕ್ಕೆ ಶ್ರಮಿಸಿದ್ದರು. ಪಂಚವಾರ್ಷಿಕ ಯೋಜನೆ ಜಾರಿಗೆ ತಂದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದರು. ಹಾಗೆಯೇ ಕೈಗಾರಿಕೆಗಳನ್ನು ಸ್ಥಾಪಿಸಿ ಔದ್ಯೋಗಿಕವಾಗಿಯೂ ಭಾರತ ಮುಂದುವರೆಯಲು ಕಾರಣೀಕರ್ತ ಎಂದರು.ಈ ದೇಶಕ್ಕೆ ಪ್ರಜಾಪ್ರಭುತ್ವ ಅಭಿವೃದ್ಧಿ, ಆಧುನೀಕತೆಯ ಅಡಿಪಾಯ ಹಾಕಿದವರು ನೆಹರುಎಂದು ಅವರು ದೇಶದ ಸ್ವಾತಂತ್ರ್ಯಕ್ಕಾಗಿ, ಅಭಿವೃದ್ಧಿಗಾಗಿ ಅಪಾರ ತ್ಯಾಗ ಮಾಡಿದ ಕುಟುಂಬ ಅವರದ್ದು, ಈಗ ಅವರನ್ನು ಟೀಕೆ ಮಾಡುತ್ತಾರೆ. ಇದು ಸರಿಯಲ್ಲ, ಅವರ ತ್ಯಾಗ, ಬಲಿದಾನಗಳನ್ನು ನಾವು ಸ್ಮರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಸಚಿವಾರದ ಕೆ.ಎಚ್ ಮುನಿಯಪ್ಪ, ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಭೈರತಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.