ನೆಹರೂ ಯುವ ಕೇಂದ್ರದಿಂದ ರಾಷ್ಟ್ರೀಯ ಏಕತಾ ದಿವಸ

ಬೀದರ ನ 08: ಭಾರತ ಸರ್ಕಾರ ನೆಹರು ಯುವಕೇಂದ್ರದಿಂದ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ಪ್ರೌಢಶಾಲೆಯಲ್ಲಿ ಸರ್ದಾರ ವಲ್ಲಭಬಾಯ್ ಪಟೇಲ್‍ರ ಜಯಂತಿ ನಿಮಿತ್ತ ಇತ್ತೀಚೆಗೆ ರಾಷ್ಟ್ರೀಯ ಏಕತಾ ದಿವಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಪ್ರೌಢಶಾಲೆಯ ನಿರ್ದೇಶಕರಾದ ನರೇಂದ್ರ ಅರಟಗಿ ಅವರು ಮಾತನಾಡಿ, ದೇಶವು ಸಮೃದ್ಧಿಯಾಗಿ ಬೆಳೆಯಬೇಕಾದರೆ ದೇಶದ ಎಲ್ಲ ಜನರಲ್ಲಿ ಏಕತೆಯ ಭಾವನೆ ಮೂಡಬೇಕು. ಮುಖ್ಯವಾಗಿ ನಾಡಿನ ಯುವಕರು ಒಗ್ಗಟ್ಟಿನಿಂದ ಬೆಳೆಯಬೇಕು ಎಂದು ಸಲಹೆ ಮಾಡಿದರು.
ಜ್ಞಾನಲಿಂಗ ರುದ್ರಮುನಿ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಯೂರಕುಮಾರ ಗೋರಮೆ ಅವರು ಮಾತನಾಡಿದರು.
ಸಮಾರಂಭದಲ್ಲಿ ಶಿಕ್ಷಕರಾದ ಜಗನ್ನಾಥ ಸೇಗಿ, ಸತೀಶ ಪೋಸ್ತರ, ಅಶೋಕ, ಸಮಾಜ ಸೇವಕರಾದ ವೀರೇಶ, ಸತೀಶ ರಂಜರಿ, ಮಂಜುನಾಥ ಕಟ್ಟಿಮನಿ, ರಾಜೇಶ್ವರ ಗ್ರಾಮದ ಯುವಕ ಯುವತಿಯ ಸಂಘಗಳ ಪದಾಧಿಕಾರಿಗಳು, ನೆಹರೂ ಯುವ ಕೇಂದ್ರದ ಹರೀಶ, ನಾಗೇಶ ಹಾಗೂ ಇನ್ನೀತರ ಕಾರ್ಯಕರ್ತರು ಇದ್ದರು.