ನೆಲ್ಲೂರು ಕೆಮ್ರಾಜೆಯಲ್ಲಿ ದಾಸ್ತಾನು ಕೊಠಡಿಗೆ ಬೆಂಕಿ-೨.೫ ಲಕ್ಷ ಮೌಲ್ಯದ ಸ್ವತ್ತು ಬೆಂಕಿಗಾಹುತಿ

ಸುಳ್ಯ, ಜೂ.೧೦-ನೆಲ್ಲೂರು ಕೆಮ್ರಾಜೆ ಗ್ರಾಮದ ಕೆರೆಮೂಲೆ ಉಮೇಶ ನಾಯಕ್ ಎಂಬವರ ಅಡಿಕೆ, ಕರಿಮೆಣಸು ಇದ್ದ ದಾಸ್ತಾನು ಕೊಠಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅಂದಾಜು ೨.೫ ಲಕ್ಷ ರೂ. ನಷ್ಟ ಸಂಭವಿಸಿರುವ ಘಟನೆ ಬುಧವಾರ ವರದಿಯಾಗಿದೆ.
ಬೆಂಕಿ ಅವಘಡಕ್ಕೆ ಕಾರಣ ತಿಳಿ ಬಂದಿಲ್ಲ. ಬೆಂಕಿಯನ್ನು ಸ್ಥಳೀಯರು ಸೇರಿ ನಂದಿಸಿರುವುದಾಗಿ ತಿಳಿದು ಬಂದಿದೆ. ದಾಸ್ತಾನು ಕೊಠಡಿಯಲ್ಲಿ ಅಡಿಕೆ ಕರಿಮೆಣಸು ಇದ್ದು ಬಹುತೇಕ ಬೆಂಕಿಗಾಹುತಿಯಾಗಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ನೆಲ್ಲೂರು ಕೆಮ್ರಾಜೆ ಗ್ರಾಮ ಕರಣಿಕರಾದ ಮಾರುತಿ ಕಾಂಬ್ಲೆ, ಉಪಾಧ್ಯಕ್ಷ ಧನಂಜಯ ಕುಮಾರ್, ಮಾಜಿ ಅಧ್ಯಕ್ಷ ದಿವಾಕರ ನಾಯಕ್ ಎರ್ಮೆಟ್ಟಿ ಭೇಟಿ ನೀಡಿದ್ದಾರೆ.