ನೆಲ್ಲೂರು ಆಲೂ ಸ್ಪೆಷನ್

ಬೇಕಾಗುವ ಪದಾರ್ಥಗಳು:

  • ಬೇಬಿ ಆಲೂಗೆಡ್ಡೆ – ಕಾಲು ಕೆಜಿ (ಬೇಯಿಸಿ ಸಿಪ್ಪೆತೆಗೆದದ್ದು)
  • ಮೊಸರು – ಕಾಲು ಲೋಟ
  • ಅರಿಶಿನ – ಅರ್ಧ ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು
  • ಪುದೀನಾ – ೨೦ ಎಲೆ
  • ಕೊತ್ತಂಬರಿ ಸೊಪ್ಪು – ರುಚಿಗೆ ತಕ್ಕಷ್ಟು
  • ಅಚ್ಚಖಾರದಪುಡಿ – ೨ ಚಮಚ
  • ಗರಂಮಸಾಲ – ಅರ್ಧ ಚಮಚ
    (ಇವುಗಳೆಲ್ಲವನ್ನೂ ಸೇರಿಸಿ ಕಲೆಸಿ, ೧೫ ನಿಮಿಷ ಬಿಡಬೇಕು.)

ಇತರೆ:

  • ಎಣ್ಣೆ – ೧ ಚಿಕ್ಕಸೌಟು
  • ಈರುಳ್ಳಿ – ಅರ್ಧ ಲೋಟ
  • ಹಸಿಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ

ವಿಧಾನ: ಎಣ್ಣೆಗೆ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ, ನಂತರ ಮಸಾಲೆಯಲ್ಲಿ ನೆಂದ ಆಲೂ ಹಾಕಿ, ಫ್ರೈ ಮಾಡಿ ಇಳಿಸಬೇಕು.