
ಜೇವರ್ಗಿ :ಆ.5: ತಾಲೂಕಿನ ನೆಲೋಗಿ ಗ್ರಾಮ ಪಂಚಾಯತ್‍ನ ಎರಡನೇ ಅವಧಿಗೆ ಅಧ್ಯಕ್ಷ-ಉಪಾದ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ತಾಯಮ್ಮ ಕೀರಣಗಿ ಹಾಗೂ ಗುರುಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೆಲೋಗಿ ಗ್ರಾಪಂನಲ್ಲಿ ಒಟ್ಟು 21 ಜನ ಸದಸ್ಯರಿದ್ದು, ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ತಾಯಮ್ಮ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗುರುಗೌಡ ಪಾಟೀಲ ಮಾತ್ರ ನಾಮಪತ್ರ ಸಲ್ಲಿಸಿದರು. ಇವರಿಬ್ಬರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಅಬ್ದುಲ್ ನಬಿ ಘೋಷಿಸಿದರು.
ವಿಜಯೋತ್ಸವ : ಕಾಂಗ್ರೆಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ವಿಜಯೋತ್ಸವ ಆಚರಿಸಲಾಯಿತು. ಕಾಂಗ್ರೆಸ್ ಮುಖಂಡರಾದ ರಾಜಶೇಖರ ಸೀರಿ, ಬೈಲಪ್ಪ ನೇದಲಗಿ, ಶರಣು ಸಾಹು ಬಿಲ್ಲಾಡ, ಮಲ್ಕಣಗೌಡ ಮಾಲಿಪಾಟೀಲ, ಅಪ್ಪಾಸಾಬ ಹೊಸಮನಿ, ವಿಧ್ಯಾಧರ ಚೌಡಾಪೂರ, ಭಗವಂತ್ರಾಯ ಗುಜಗೊಂಡ, ಭೀಮಾಶಂಕರ ಕಾಚಾಪೂರ, ಶರಭು ಕಲ್ಯಾಣಿ, ಮಹಿಮೂದ್ ನೂರಿ, ಭೀಮರಾಯ ಸಂಧಿಮನಿ, ಸೋಮರಾಯ ಗುಜಗೊಂಡ, ರಾಜು ಮುದ್ದಾ, ನಿಂಗಣ್ಣ ಅಂಬಿಗೇರ, ಭೀಮಣ್ಣ ನಾಟಿಕಾರ, ಭೂತಾಳಿ ಭಾಸಗಿ, ಬಸವರಾಜ ಕಂಕಿ, ಗುಣಾಕಾರ ನಡಗಟ್ಟಿ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.