ನೆಲೆಮಹೇಶ್ವರಮ್ಮ ನಾಗರೀಕರ ಸಂಘ ಉದ್ಘಾಟನೆ

ಪೀಣ್ಯ ದಾಸರಹಳ್ಳಿ,ಮಾ.೧೭- ಭುವನೇಶ್ವರಿ ನಗರದಲ್ಲಿ ಶ್ರೀ ನೆಲೆ ಮಹೇಶ್ವರಮ್ಮ ನಾಗರಿಕರ ಸಂಘವನ್ನು ಶಾಸಕ ಆರ್.ಮಂಜುನಾಥ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕ ಆರ್ ಮಂಜುನಾಥ್ ಅವರು ’ ಒಳ್ಳೆಯ ಕೆಲಸಗಳನ್ನು ಮಾಡಲು ಆರಂಭಿಸಿರುವ ಈ ಸಂಘದ ಪದಾಧಿಕಾರಿಗಳು ಎಲ್ಲರೂ ಸಹಕಾರ, ಸಹಬಾಳ್ವೆಯಿಂದ ಸಂಘವನ್ನು ಮುನ್ನಡೆಸುತ್ತಾ ಒಳ್ಳೆಯ ಕಾರ್ಯಗಳನ್ನು ಮಾಡಲಿ, ನನ್ನ ಪ್ರೋತ್ಸಾಹ ಸದಾ ಇರುತ್ತದೆ’ ಎಂದು ಆಶಿಸಿದರು.
’ಈ ನಮ್ಮ ಸಂಘದಿಂದ ಇಲ್ಲಿನ ಸುತ್ತಮುತ್ತಲ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ, ಸಾಮಾಜಿಕ ಕಳಕಳಿ, ಆರ್ಥಿಕ ಸಹಾಯ, ಧಾರ್ಮಿಕ ಪೂಜಾ ಕಾರ್ಯ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಸೇವೆ ಮಾಡುವ ಉದ್ದೇಶದಿಂದ ಸಂಘವನ್ನು ಸ್ಥಾಪಿಸಿದ್ದೇವೆ’ಎಂದು ಅಧ್ಯಕ್ಷ ಕೆ. ಸಿ. ನಾರಾಯಣಪ್ಪ ತಿಳಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಕೆ. ಸಿ. ನಾರಾಯಣಪ್ಪ, ಉಪಾಧ್ಯಕ್ಷ ಡಿ.ಎಸ್. ಮಣಿ, ಪ್ರಧಾನ ಕಾರ್ಯದರ್ಶಿ ವೈ. ಬಿ. ಎಚ್. ಜಯದೇವ್, ಸಹಕಾರ್ಯದರ್ಶಿ ಈರೇಗೌಡ ಎಸ್. ಎಂ, ಸಂಘಟನಾ ಕಾರ್ಯದರ್ಶಿ ಗಂಗಾಧರ ಸ್ವಾಮಿ, ಖಜಾಂಚಿ ಎಸ್. ಕೃಷ್ಣಮೂರ್ತಿ, ಗೌರವಾಧ್ಯಕ್ಷ ಸಿ. ಮುನಿರಾಜು, ವಿಐಪಿ ಶಾಲೆಯ ಸಂಸ್ಥಾಪಕ ವೆಂಕಟೇಶ್ ಮತ್ತು ಅನೇಕ ಸದಸ್ಯರು ಇದರಲ್ಲಿ ಇದ್ದಾರೆ.