ನೆಲಹಾಳ: ತಿಪ್ಪರಾಜು ಬಿರುಸಿನ ಪ್ರಚಾರ

ರಾಯಚೂರು,ಏ.೨೮- ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ನೆಲಹಾಳ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಲ್ದಾರ ಅವರ ಪರವಾಗಿ ಮುಖಂಡರು, ಕಾರ್ಯಕರ್ತರು ಬಿರುಸಿನ ಪ್ರಚಾರ ಮಾಡಿದರು.
ಬಿಜೆಪಿ ಪಕ್ಷದ ಅಭ್ಯರ್ಥಿ ತಿಪ್ಪರಾಜು ಹವಲ್ದಾರ ಅವರನ್ನು ನೆಲಹಾಳ ಗ್ರಾಮದಲ್ಲಿ ನೂರಾರು ಕಾರ್ಯಕರ್ತರು ಹೂ ಮಳೆ ಸುರಿಸಿ ಭವ್ಯವಾಗಿ ಅದ್ದೂರಿಯಾಗಿ ಸ್ವಾಗತಿಸಿದರು. ಬಿಜೆಪಿ ಪಕ್ಷದ ಸಿದ್ದಾಂತ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಗ್ರಾಮಸ್ಥರಿಗೆ ತಿಳಿಸುವ ಮೂಲಕ ಮನೆ ಮನೆಗೆ ತೆರಳಿ ಕೈ ಮುಗಿದು ಮತಯಾಚಿಸಿದರು.
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ತಿಪ್ಪರಾಜು ಹವಲ್ದಾರ ಪರ ಅಲೆ ಭಾರೀ ಪ್ರಮಾಣದಲ್ಲಿದ್ದು, ಎಲ್ಲಡೆಯೂ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.
ಬಿಜೆಪಿ ಪಕ್ಷಕ್ಕೆ ಸೇರ್ಪಡೆ: ಪಕ್ಷದ ಸಿದ್ದಾಂತ ಮೆಚ್ಚಿ ಕಾಂಗ್ರೇಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಮಹೇಶಗೌಡ ನೆಲಹಾಳ, ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಚಾಂದಪಾಷ, ಭೀಮನಗೌಡ, ರುದ್ರಪ್ಪಗೌಡ, ಸಿದ್ದಪ್ಪಗೌಡ, ಹನುಮಂತಗೌಡ, ಇರ್ಷಾದ್, ಅಮೀನ್ ಬಹದ್ದೂರ, ಕಲಂದರ ಪಾಷ, ಕ್ರಿಷ್ಣಮೂರ್ತಿ, ಗಿಂಜರ್ಲಿ ಶರಣಪ್ಪ, ಬಾಗ್ಲಿ ರಾಮಾಂಜ, ಹುಸೇನಪ್ಪ, ವಿಶ್ವನಾಥ, ಬೆಳಗಲ್ ಇಸ್ಮಾನ್, ಉಪ್ರಾಳ ಮಹಿಬೂಬ್ , ಗೋಪಿ, ಅಬ್ರಹಾಂ, ಈರೇಶ ಸೇರಿದಂತೆ ನೂರಾರು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.