ನೆಲಮೂಲದ ಕೃಷಿ ಸಂಸ್ಕøತಿಗೆ ವಿರೋಧವಾದ ಪರಾವಲಂಬಿಗಳ ಋಷಿ ಸಂಸ್ಕೃತಿಯ ಅಪಾಯ

ವಿಜಯಪುರ, ಜು.26-ನೆಲಮೂಲದ ಕೃಷಿ ಸಂಸ್ಕøತಿಗೆ ವಿರೋಧವಾದ ಪರಾವಲಂಬಿಗಳ ಋಷಿ ಸಂಸ್ಕೃತಿಯ ಅಪಾಯಗಳ ಬಗ್ಗೆ ಎಚ್ಚರಿಸಿದರು. ಮುಂದುವರೆದು ಸ್ವಾಮಿಗಳವರು ದೇಶದ ಸೌಹಾರ್ದತೆಯನ್ನು ಹಾಳುಗೆಡವಿ ರಾಜಕೀಯ ಲಾಭ ಗಳಿಸುತ್ತಿರುವ ಪುರೋಹಿತಶಾಹಿಗಳ ಪಟ್ಟಭದ್ರ ಹುನ್ನಾರದ ಬಗ್ಗೆ ನಾವೆಲ್ಲ ಜಾಗೃತರಾಗಿರಬೇಕು ಹಾಗೂ ನಮ್ಮ ಮಹಾಪುರುಷÀರ ಇತಿಹಾಸ? ವ್ಯಕ್ತಿತ್ವ ಮತ್ತು ಅವರ ಚಿಂತನೆಗಳನ್ನು ತಿರುಚುವ? ಹಾಗೂ ಕಲಬೆರಕೆ ಮಾಡುತ್ತಿರುವವರ ಬಗ್ಗೆ ಎಚ್ಚರಿಕೆ ಅಗತ್ಯವೆಂದು ಪ್ರತಿಪಾದಿಸಿದರು. ಆ ದಿಶೆಯಲ್ಲಿ ರಾಷ್ಟ್ರೀಯ ಸೌಹಾರ್ದ ವೇದಿಕೆ ಕಾರ್ಯೋನ್ಮುಖವಾಗಲಿ ಎಂದು ಕೋರ್ಣೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ವಿಶ್ವನಾಥ್ ಕೊರನೇಶ್ವರ ಸ್ವಾಮಿಗಳು ಹೇಳಿದರು.
ವಿಜಯಪುರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ರಾಷ್ಟ್ರೀಯ ಸೌಹಾರ್ದ ವೇದಿಕೆಯ ವಿಜಯಪುರ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಸೌಹಾರ್ದತೆಯೆತ್ತ ಭಾರತ ಎಂಬ ಚಿಂತನಾಗೋಷ್ಠಿ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾಡಿದರು.
ಪ್ರಗತಿಪರ ವಿಚಾರಧಾರೆ ಕುರಿತು ಮಾತನಾಡುತ್ತಾ ವಿಚಾರಧಾರೆ ಎಂದರೆ ಯಾವ ನೀರು ನಿರಂತರವಾಗಿ ಹರಿಯುವ ಮೂಲಕ ಕುಡಿಯಲು ಯೋಗ್ಯವಾಗಿರುತ್ತದೆ ಅದೇ ರೀತಿ ಯಾವ ವಿಚಾರಧಾರೆ ಬೆಳೆಯುತ್ತಾ ಹೋಗುತ್ತದೆ ಬಹುತೇಕ ಜನರಿಗೆ ಬದುಕು ಕೊಡುತ್ತದೆ ಜೀವನ ರೂಪಿಸಿಕೊಳ್ಳಲು ಸಹಾಯಕಾರಿಯಾಗಿರುತ್ತದೆ
ಆ ವಿಚಾರಧಾರೆ ಯಾವತ್ತೂ ಪ್ರಗತಿಪರವಾಗಿರುತ್ತದೆ ಎಂದು ಹೇಳಿದರು. ಸಮಾನತೆಯನ್ನು ಸಾರ್ವಭೌಮತ್ವವನ್ನು ಸೌಹಾರ್ದತೆಯನ್ನು ಸಹೋದರತ್ವವನ್ನು ಎತ್ತಿ ಹಿಡಿಯುತ್ತದೋ ಇಂತಹ ವಿಚಾರಧಾರೆಯನ್ನು ಪ್ರತಿಗಾಮಿ ಶಕ್ತಿಗಳು ಸಹಿಸುವುದಿಲ್ಲ. ಪುರೋಹಿತಶಾಹಿ ವರ್ಗ ಅಸಮಾನತೆಯನ್ನು ಎತ್ತಿ ಹಿಡಿಯುತ್ತದೆ. ಸಮಾನತೆಯ ಸಾರುವ ಬುದ್ಧ, ಬಸವಣ್ಣ, ಅಂಬೇಡ್ಕರ್ ಆದಿಯಾಗಿ ಎಲ್ಲರೂ ಇವತ್ತಿನ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರತಿಗಾಮಿ ಶಕ್ತಿಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಂದು ದೇಶದಾದ್ಯಂತ ಕೋಮು ಗಲಭೆಗಳು, ಧಾರ್ಮಿಕ ಅಂದಾಭಿಮಾನಿಗಳು, ಧಾರ್ಮಿಕ ಪ್ರಚೋದನಕಾರಿ ಹೇಳಿಕೆಗಳು ಕೊಡುತ್ತ ಜನಗಳನ್ನ ವಿಶೇಷವಾಗಿ ಮುಗ್ಧ ಜನರನ್ನು ಗೊಂದಲದಲ್ಲಿ ಸಿಲುಕಿಸುತ್ತಿದ್ದಾರೆ. ಸಮಾಜದ ಬೆಳವಣಿಗೆಯಲ್ಲಿ ಯಾವಾಗಲೂ ಪ್ರತಿಗಾಮಿ ಶಕ್ತಿಗಳು ವಿಚಿದ್ರಕಾರ್ಯ ವರ್ತನೆ ಮಾಡಿದಾಗ ಪ್ರಗತಿಪರ ಕೈ ಮೇಲಾಗುತ್ತದೆ ಇದಕ್ಕೆ ಕಾರಣ ಮಹಾನ್ ಮೇಧಾವಿಗಳು ಹೇಳಿರುವ ವಿಚಾರಧಾರೆಗಳು ಜನಸಾಮಾನ್ಯರು ಮೈಗೂಡಿಸಿಕೊಳ್ಳುವ ಅನಿವಾರ್ಯ ಬರುತ್ತದೆ. ಆದರೆ ಪ್ರತಿಗಾಮಿ ಶಕ್ತಿಗಳು ನಿಜವಾದ ಇತಿಹಾಸವನ್ನು ಅಳಿಸಿ ನಿಜವಾದ ವಿಚಾರಧಾರೆಯನ್ನು ಕಲಬೆರಿಕೆ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದೆ.
ಇಂತಹ ಇಂತಹ ಕಲಬೆರಿಕೆ ವಿಚಾರ ದಾರೆಯನ್ನು ಓದುಗರು ಒಪ್ಪಿಕೊಳ್ಳಕೂಡದು ಪ್ರಶ್ನೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಮೂಲಗುಣವಾಗಬೇಕೆಂದು ಸ್ವಾಮೀಜಿಗಳು ತಮ್ಮ ಉದ್ಘಾಟನೆ ಭಾಷÀಣದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಪೆÇ್ರ. ಆರ್ ಕೆ ಹುಡಗಿಯವರು ಮಾತನಾಡಿ, ಫ್ಯಾಸಿಜಂ ನ ಅಪಾಯಗಳು ಮತ್ತು ಅದನ್ನು ಎದುರಿಸುವ ಮಾರ್ಗೋಪಾಯಗಳ ಕುರಿತು ವಿಸ್ತ್ರತವಾಗಿ ಮಾತನಾಡಿದರು. ಭಾರತದ ಸ್ವಾತಂತ್ರ ಸಂಜ್ರಾಮದಲ್ಲಿ ಭಾಗವಹಿಸದೆ? ಬ್ರಿಟೀಷರಿಗೆ ಸಹಾಯ ಮಾಡಿದವರ ಪೀಳಿಗೆ ಇಂದು ನಮಗೆ ದೇಶಭಕ್ತಿ ಮತ್ತು ರಾಷÀ್ಟ್ರವಾದದ ಕುರಿತು ಪಾಠ ಮಾಡುತ್ತಿದೆ ಎಂದು ಫ್ಯಾಸಿಸ್À್ಟರನ್ನು ತರಾಟೆಗೆ ತೆಗೆದುಕೊಂಡರು. ರಾಷ್ಟ್ರೀಯ ಸೌಹಾರ್ದ ವೇದಿಕೆ ಈ ನೆಲದಿಂದ ಫ್ಯಾಸಿಜಮ್ ಕೊನೆಗೊಳಿಸಲು ಹೋರಾಡಬೇಕೆಂದು ಕರೆ ನೀಡಿದರು. ಆ ಕೆಲಸ ಬಸವಣ್ಣ ಹುಟ್ಟಿದ ವಿಜಯಪುರದಿಂದಲೆ ಆರಂಭಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.
1900 ವಷರ್À ಇತಿಹಾಸವಿರುವ ಭಾರತಿಯ ಕ್ರಿಶ್ಚಿಯನ್ನರು ಎರಡು ನೂರು ವಷರ್À ನಮ್ಮ ದೇಶದ ಆಳ್ವಿಕೆ ಮಾಡಿದರೂ ಇಂದು ಕ್ರಿಶ್ಚಿಯನ್ದರ್ ಜನಸಂಖ್ಯೆ ಶೇಕಡ 2.2 ರಷÀ್ಟು ಮಾತ್ರ ಇದೆ. ಅದೇ ರೀತಿ ಸಾವಿರದ ನಾಲ್ಕು ನೂರು ವಷರ್À ಇತಿಹಾಸವಿರುವ ಭಾರತೀಯ ಮುಸಲ್ಮಾನರು ಸುಮಾರು 500 ವರ್ಷ ಭಾರತದ ಆಳ್ವಿಕೆ ಮಾಡಿದರೂ ಇಂದು ಅವರ ಜನಸಂಖ್ಯೆ ಶೇಕಡ 18.5 ರಷÀ್ಟು ಮಾತ್ರ ಇದೆ.
ಆದರೆ ಇಂದು ಅಧಿಕಾರದಲ್ಲಿರುವ ಸಂಘಿಗಳು ಪುರೋಹಿತಶಾಹಿವರ್ಗದವರು ಇಂದು ಮುಸಲ್ಮಾನರ ಮತ್ತು ಕ್ರಿಶ್ಚನ್ನರ ಜನಸಂಖ್ಯೆ ಹೆಚ್ಚಾಗುತ್ತಿದೆ, ಮತಾಂತರ ಮಾಡುತ್ತಿದ್ದಾರೆ. ಎಲ್ಲಾ ಉದ್ಯೋಗದಲ್ಲೂ ಅವರೇ ಇದ್ದಾರೆ. ದೇವಾಲಯಗಳು ಚರ್ಚಗಳಾಗಿವೆ ಮತ್ತು ಮಸೀದಿಗಳಾಗಿವೆ ಎಂದು ಮುಗ್ಧ ಜನರನ್ನು ಭಾವನಾತ್ಮಕವಾಗಿ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗುವುದರಿಂದ ಹಿಂದೂಗಳಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಮುಸಲ್ಮಾನರ ಮಾಂಸದ ಅಂಗಡಿಗಳಿಗೆ ಹೋಗಬೇಡಿ, ಕಟಿಂಗ್ ಅಂಗಡಿಗೆ ಹೋಗಬೇಡಿ ಎನ್ನುವಂತಹ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಕ್ರಿಶ್ಚಿಯನ್ರು ಮುಸಲ್ಮಾನರು ಒಂದು ವೇಳೆ ದೇವಾಲಯಗಳು ನಾಶ ಮಾಡುವ ಪ್ರವೃತ್ತಿ ಇದ್ದಿದ್ದರೆ ಅಷÀ್ಟು ವಷರ್À ಅಧಿಕಾರ ಮಾಡಿದವರು ಒಂದೂ ದೇವಾಲಯಗಳು ಕಾಣದಂತೆ ಮಾಡಬಹುದಾಗಿತ್ತು. ಆದರೆ ಅವರು ಹಾಗೆ ಮಾಡಿಲ್ಲ. ಆದರೂ ಸಂಘ ಪರಿವಾರದವರು, ಪುರೋಹಿತಶಾಹಿ ವರ್ಗ ಏಜೆಂಟರು ಅಸಮಾನತೆ ಹುಟ್ಟು ಹಾಕಲು ಧಾರ್ಮಿಕ ಅಂದಾಭಿಮಾನ ಸೃಷ್ಟಿ ಮಾಡಲು ಈ ರೀತಿ ಮಾಡುತ್ತಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಹೇಳಿದರು.
ಇನ್ನೊಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೆÇ್ರಫೆಸರ್ ಪ್ರಭು ಖಾನಾಪುರೆÀವರು ಮಾತನಾಡುತ್ತಾ, ನಮ್ಮ ಮೇಲೆ ಹೇರಿರುವ ನಮ್ಮದಲ್ಲದ ವೈದಿಕ ಸಂಸ್ಕೃತಿಯನ್ನು ಶ್ರಮ ಸಂಸ್ಕೃತಿಯ ಹಿನ್ನೆಲೆಯಿಂದ ಬಂದ ನಾವೆಲ್ಲರು ತಿರಸ್ಕರಿಸಬೇಕೆಂದು ಕರೆಕೊಟ್ಟರು. ಇಂದು ಮನುಸ್ಮೃತಿಯನ್ನು ತರಲು ಹವಣಿಸುತ್ತಿರುವ ಸಂಘಿಗಳು ಅಧಿಕಾರದಲ್ಲಿ ಬಂದಿದ್ದಾರೆ. ಇದರಿಂದ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಬರುತ್ತಿದೆ.ಅದಕ್ಕಾಗಿ ಭಾರತದ ಮೂಲ ನಿವಾಸಿಗಳಾದ ನಾವೆಲ್ಲರೂ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ದಲಿತರು ಎಲ್ಲಾ ವರ್ಗದ ಶೋಷಿತ ಜನ ಒಂದಾಗಬೇಕಾಗಿದೆ ಎಂದರು. ಜೊತೆಗೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿಜಿಯವರ ವಿಚಾರಧಾರೆಯನ್ನು ಮೈಗೂಡಿಸಿಕೊಳ್ಳಬೇಕಿದೆ. ಆ ಮೂಲಕ ಮನಸ್ಮೃತಿಯನ್ನು ಹೊಡೆದೋಡಿಸಿ ಭೀಮಸ್ಮೃತಿಯನ್ನು ತರಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಷ್ಟ್ರೀಯ ಸೌಹಾರ್ದ ವೇದಿಕೆಯ ಗೌರವಾಧ್ಯಕ್ಷರಾದ ಜಿಲ್ಲಾ ನಿವೃತ್ತ ನ್ಯಾಯಾಧೀಶರಾದ ವಸಂತ ಮುಳಸಾವಳಗಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಉಪಾದ್ಯಕ್ಷರು ಹಾಗು ಚಿಂತಕರಾದ ಡಾ. ಜೆ ಎಸ್ ಪಾಟೀಲ ಅವರು ವೇದಿಕೆಯ ಹುಟ್ಟಿನ ಹಿನ್ನೆಲೆ ಮತ್ತು ಅದರ ಮುಂದಿನ ಧ್ಯೇಯೋದ್ದೇಶಗಳ ಬಗ್ಗೆ ಒಂದು ಸಮಗ್ರ ನೋಟವನ್ನು ನೀಡಿದರು.
ಸ್ಥಳೀಯ ಅತಿಥಿಗಳಾಗಿ ವಿಜಯಪುರ ಜಿಲ್ಲೆಯ ಪ್ರಗತಿಪರ ಚಿಂತಕರಾದ ಶ್ರೀ ರಿಯಾಜ್ ಫಾರೂಕಿ ಹಾಗೂ ಫಾದರ್ ಟಿಯೋಲ್ ಮಜಾಡೋ ಹಾಗೂ ಹಿರಿಯ ಹೋರಾಟಗಾರರಾದ ಭೀಮಶಿ ಕಲಾದಗಿಯವರು ಹಾಗೂ ಸೌಹಾರ್ದ ವೇದಿಕೆಯ ಸಂಸ್ಥಾಪಕ ಉಪಾಧ್ಯಕ್ಷರಾದ ಶ್ರೀ ಮೋಹನ್ ಹಿಪ್ಪರಗಿ ಅವರು ಮಾತನಾಡಿದರು. ಹಾಗೂ ಶ್ರೀಮತಿ ರಾಜೇಶ್ವರಿ ಹಿಪ್ಪರಗಿ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ವೇದಿಕೆ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಗಂಟೆಪ್ಪಗೋಳ ಮಾಡಿದರು. ವಂದನಾರ್ಪಣೆಯನ್ನು ವೇದಿಕೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಫಯಾಜ್ ಕಲಾದಗಿ ಅವರು ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಭರತ್ ಕುಮಾರ್ ಹಾಗೂ ಬಾಳು ಜೇವೂರ್ ಮಾಡಿದರು. ಕಾರ್ಯಕ್ರಮದ ಆರಂಭದಲ್ಲಿ ದೇಶಭಕ್ತಿ ಗೀತೆ, ಕ್ರಾಂತಿ ಗೀತೆಗಳು ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಎಸ್.ಎಂ.ಪಾಟೀಲ ಗಣಿಹಾರ, ನಾಗರಾಜ ಲಂಬು, ಸಿದ್ದು ರಾಯಣ್ಣವರ, ವಿದ್ಯಾರಾಣಿ ತುಂಗಳ, ಜಿ.ಜಿ.ಗಾಂಧಿ, ಎಸ್.ಕೆ.ಗೋಂಗಡಿ, ವಿ.ಎ.ಪಾಟೀಲ, ಶ್ರೀಮತಿ ವಿದ್ಯಾವತಿ ಅಂಕಲಗಿ, ಎಚ್.ಎಸ್.ಕಬಾಡೆ, ಮಹಾದೇವ ರಾವಜಿ, ಎ.ಎ.ಜಾಗೀರದಾರ, ಅಕ್ರಂ. ಮಾಶ್ಯಾಳಕರ, ದಸ್ತಗೀರ ಉಕ್ಕಲಿ, ಎಸ್.ಕೆ.ಪಾಟೀಲ, ವಿನೋದ ವ್ಯಾಸ, ರವಿಂದ್ರ ಜಾಧವ, ಲತೀಫ ಕಲಾದಗಿ, ಹಾಸೀಂ ಕಲಾದಗಿ, ಐ.ಸಿ.ಪಠಾಣ, ಬಸವರಾಜ ಬಿ.ಕೆ., ಪಿದಾ ಕಲಾದಗಿ, ದೀಪಾ ಕುಂಬಾರ, ವಿಜಯಶ್ರೀ ಜಾಧವ ಸೇರಿದಂತೆ ಮುಂತಾದವರು ಉಪಸ್ಥತಿರಿದ್ದರು.