ನೆಲದ ಮೇಲೆ ಮಲಗಿಸಿ ಚಿಕಿತ್ಸೆ ಕೊಡಿ ಗೋಗರೆಯುತ್ತಿರುವ ರೋಗಿಗಳು

ಬೀದರ:ಎ.19: ಗಡಿ ಜಿಲ್ಲೆ ಬೀದರ್ ನಲ್ಲಿ ಕೋರೋನಾ ಹಾಹಾಕಾರ. ಕೊರೋನಾ ಎರಡನೇ ಅಲೆ ಇನ್ನಷ್ಟು ವೇಗ ಪಡೆದುಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಯಲ್ಲಿ ಆತಂಕ ಮಡುಗಟ್ಟಿದ್ದು ಆಸ್ಪತ್ರೆಯಲ್ಲಿ ಬೆಡ್ ಇಲ್ಲದಕ್ಕೆ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ಕೊಡಿ ಎಂದು ವೈದ್ಯರನ್ನು ಗೋಗರೆಯುತ್ತಿದ್ದಾರೆ.

ರೋಗಿಯ ಸಂಬಂಧಿಕರು ಗೋಗರೆದರೂ ಕೇಳಿಸಿಕೊಳ್ಳದಂತೆ ವೈದ್ಯರು ಒಳಗೆ ಹೋದ ವಿಡಿಯೋ ಒಂದು ಹರಿದಾಡುತ್ತಿದ್ದು ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ.