ನೆಲಕಚ್ಚಿದ ಬಾಳೆ ಜಮೀನಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಶಾಸಕ ಅಲ್ಲಂಪ್ರಭು ಪಾಟೀಲ್

ಕಲಬುರಗಿ,ಮೇ.27- ಇಚೇಗೆ ಸುರಿದ ಅಕಾಲಿಕ ಮಳೆ ಮತ್ತು ಗಾಳಿಯಿಂದಾಗಿ ಹಾನಿಗಿಡಾದ ಹಡಗಿ ಹಾರುತಿ ಗ್ರಾಮದ ಬಾಳೆ, ಲಿಂಬೆ ಮತ್ತು ಈರುಳ್ಳಿ ತೊಟಕ್ಕೆ ಭೇಟಿ ನೀಡಿದ ಶಾಸಕ ಅಲ್ಲಮಪ್ರಭು ಪಾಟೀಲ ಸಂಕಷ್ಟಕ್ಕೆ ಸಿಲುಕಿದ ರೈತನ ಸಮಸ್ಯೆ ಆಲಿಸಿದರು.
ತಾಲೂಕಿನ ಹಡಗಿಲ ಹಾರುತಿ ಗ್ರಾಮದಲ್ಲಿ ಅಕಾಲಿಕ ಗಾಳಿ ಮಳೆಯಿಂದ ರೈತ ದಸ್ತಗಿರಿ ಪಟೇಲ್ ಗೆ ಸೇರಿದ 300 ಬಾಳೆ ಗಿಡ ಹಾಗೂ ಇದೇ ಗ್ರಾಮದ ಖಾಜಾ ಪಟೇಲ್ ಜಮೀನಿನಲ್ಲಿ ನಿಂಬೆ ಈರುಳ್ಳಿ ಹಾಗೂ ಮೂರು ಸಾವಿರ ಬಾಳೆ ಗಿಡಗಳು ನೆಲಕ್ಕಚ್ಚಿದ್ದ ಜಮೀನಿಗೆ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಭೇಟಿ ನೀಡಿ ಪರಿಶಿಲಿಸಿದರು.
ಸಂಕಷ್ಟಕ್ಕೆ ಸಿಲುಕಿದ ರೈತನಿಗೆ ಸಾಂತ್ವಾನಹೆಳಿದ ಶಾಸಕರು, ಸರ್ಕಾರದಿಂದ ಪರಿಹಾರ ಕೋಡಿಸುವ ಭರವಸೆ ನೀಡಿ ರೈತರಿಗೆ ದೈರ್ಯ ತುಂಬಿದರು.
ಅವರೊಂದಿಗೆ ತಹಸಿಲ್ದಾರ್ ಮಧುರಾಜ ಅಣ್ಣಾರಾಯರ ಮೇಳಕುಂದಾ ಲಿಂಗರಾಜ ಕಣ್ಣಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸಂತೋಷ ಪಾಟೀಲ್ ಡೊಣ್ಣೂರ ಭೀಮರಾವ್ ಮೇಳಕುಂದಾ ಮಹಾದೇವಪ್ಪ ಪಾಟೀಲ್ ಸೇರಿದಂತೆ ಇತರರಿದ್ದರು.