ನೆಲಕಚ್ಚಿದ ತೊಗರಿ ಹೂವು ನಷ್ಟಕ್ಕೆ ಒಳಗಾದ ರೈತ!

ಸೇಡಂ, ನ,21: ತಾಲೂಕಿನಾದ್ಯಂತ ನಿರಂತರವಾಗಿ ಎರಡು ಮೂರುದಿನಗಳಿಂದ ತುಂತುರು ಮಳೆ ಸುರಿಯುತ್ತಿದ್ದು ಇದರಿಂದಾಗಿ ಈ ಬಾರಿ ತೊಗರಿ ಬೆಳೆ ಹೆಚ್ಚು ಇಳುವರಿ ಬರುವ ಭರವಸೆಯಲ್ಲಿ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತುಂತುರು ಮಳೆಗೆ ತೊಗರಿ ಬೆಳೆಯ ಹೂವು ಭೂಮಿಗೆ ಬಿದ್ದು ನಾಶವಾಗಿ ಹೋಗುತ್ತಿವೆ ಅನ್ನದಾತನ ಶ್ರಮ ಮಳೆ ನೀರು ಪಾಲಾಗುತ್ತಿದೆ. ಈ ಬಾರಿ ತೊಗರಿ ಬೇಳೆಗೆ ಹೆಚ್ಚು ಹೂವು ಬಂದಿರುವುದರಿಂದ ತೊಗರಿ ಇಳುವರಿ ಎಂದುಕೊಂಡೆವು ಮಳೆರಾಯನ ಆಟಕ್ಕೆ ನಷ್ಟ ಅನುಭವಿಸುವಂತಾಗಿದೆ ಜೋಳ ಕಡಲೆ ಬೆಳೆಗಳಿಗೆ ಮಳೆ ಆಸರೆಯಾಗಿದೆ. ಶ್ರೀಶೈಲ ಬಿರಾದಾರ ಬಿಜನಳ್ಳಿ ರೈತ