ನೆರೆ ಹಾವಳಿ 24,942 ಕೋಟಿ ರೂ ನಷ್ಟ: ಸಚಿವ ಅಶೋಕ್

ಬೆಂಗಳೂರು, ರಾಜ್ಯದಲ್ಲಿ ತಲೆದೋರಿದ ನೆರೆ ಹಾವಳಿಯಿಂದಾಗಿ 24, 942 ಕೋಟಿರೂ ನಷ್ಟ ಸಂಭವಿಸಿದೆ ಎಂದು ಹೇಳಿರುವ, ಕಂದಾಯ ಸಚಿವ ಆರ್.‌ಅಶೋಕ್, ಪರಿಹಾರ ನೀಡುವಂತೆ ಕೋರಿ ಕೇಂದರ ಸರ್ಕಾರಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ ‌.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ 180 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಪ್ರವಾಹದಿಂದಾಗಿ 90 ಮಂದಿ ಬಲಿಯಾಗಿದ್ದಾರೆ ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ಪರಿಹಾರ ನೀಡಿದ್ದೇವೆ ಎಂದು ಹೇಳಿದರು
ಇದುವರೆಗೆ 4.50 ಕೋಟಿ ರೂ ಪರಿಹಾರ ವಿತರಿಸಲಾಗಿದೆ. 1935 ಜಾನುವಾರುಗಳು ಸಾವನ್ನಪ್ಪಿದ್ದು, 21.60 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಹಾನಿಯಾಗಿವೆ ಎಂದು ಅವರು‌ ಅಂಕಿ ಅಂಧ ನೀಡಿದರು.
ರಾಯಚೂರು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ 10 ಸಾವಿರ ಬೆಳೆ ಪರಿಹಾರ ವಿತರಿಸಲಾಗಿದೆ. ರಾಯಚೂರು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಶೀಘ್ರದಲ್ಲೇ ಪರಿಹಾರ ವಿತರಣೆ ಮಾಡುವುದಾಗಿ ಅಶೋಕ್ ವಿವರಿಸಿದರು.