ನೆರೆ ಹಾವಳಿ ಕೇಂದ್ರ ಅಧ್ಯಯನ ತಂಡದ ಪ್ರವಾಸ

ಕಲಬುರಗಿ,ಸೆ.6: ಕಳೆದ ಜುಲೈ-ಆಗಸ್ಟ್ ಮಾಹೆಯಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಹಾಳಾದ ಬೆಳೆಗಳ ವೀಕ್ಷಣೆಗೆ ಕೇಂದ್ರ ಸರ್ಕಾರದ ಅಂತರ ಸಚಿವಾಲಯದ ನೆರೆ ಹಾವಳಿ ಅಧ್ಯಯನ ತಂಡ ಸೆ.8 ರಂದು ಕಲಬುರಗಿಗೆ ಆಗಮಿಸಲಿದೆ.
ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್.ಬಿ.ತಿವಾರಿ ಅವರೊಂದಿಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಎಸ್.ಓ. ಎಸ್.ಜಗದೀಶ ತಂಡದಲ್ಲಿದ್ದಾರೆ.
ಅಧ್ಯಯನ ತಂಡ ಸೆ.8 ರಂದು ಜಿಲ್ಲೆಯಲ್ಲಿ ನೆರೆ ಹಾವಳಿಯಿಂದಾದ ಬೆಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡಲಿದೆ.
ಮರು ದಿನ ಸೆ.9 ರಂದು ಇಲ್ಲಿಂದ ಯಾದಗಿರಿ ಜಿಲ್ಲೆಗೆ ಅಧ್ಯಯನ ತಂಡ ಪ್ರಯಾಣಿಸಲಿದೆ.