ನೆರೆ ಸಂತ್ರಸ್ತರಿಗೆ ಸೀರೆ, ಬ್ಲ್ಯಾಂಕೇಟ್, ಮಾಸ್ಕ್ ವಿತರಣೆ

ಕಲಬುರಗಿ,ನ.20-ಮಹಿಳಾ ಪ್ರಗತಿಪರ ಚಿಂತಕರ ವೇದಿಕೆ, ಜಸ್ಟೀಸ್ ಡಾ.ಶಿವರಾಜ ಪಾಟೀಲ ಫೌಂಡೇಶನ್, ಜೇವರ್ಗಿ ಕಾಲೋನಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಸ್ಪಾರ್ಕಲ್ ಗ್ರೂಫ್, ಸ್ತ್ರೀಶಕ್ತಿ ಒಕ್ಕೂಟ ಮತ್ತು ರೇಶ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರದ ನಿರಾಶ್ರಿತರ ಕೇಂದ್ರ, ಧಂಗಾಪೂರ ಮತ್ತು ತೆಲ್ಲೂರ ಗ್ರಾಮಗಳಲ್ಲಿನ ನೆರೆ ಸಂತ್ರಸ್ತರಿಗೆ ಸೀರೆ, ಬ್ಲ್ಯಾಂಕೇಟ್, ಖಾರದ ಪಾಕೇಟ್ ಮತ್ತು ಸಿಹಿ ವಿತರಣೆ ಮಾಡಲಾಯಿತು.
ಶಾಸಕ ಎಂ.ವೈ.ಪಾಟೀಲ ಅವರು ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಸಿಸ್ಟೆಂಟ್ ಕಮೀಷನರ್, ಪ್ರೊಬೇಷನರಿ ಅಸಿಸ್ಟೆಂಟ್ ಕಮಿಷನರ್, ಅಫಜಲಪುರ ತಹಶೀಲ್ದಾರ ನಾಗಮ್ಮ, ಮಹಿಳಾ ಪ್ರಗತಿಪರ ಚಿಂತಕರ ವೇದಿಕೆ ಅಧ್ಯಕ್ಷೆ ಡಾ.ನಾಗರತ್ನ ದೇಶಮಾನ್ಯೆ, ಜಸ್ಟೀಸ್ ಡಾ.ಶಿವರಾಜ ಪಾಟೀಲ ಫೌಂಡೇಶನ್ ನ ಶ್ರೀಮತಿ ಗೀತಾ ಚೆನ್ನಾರೆಡ್ಡಿ ಪಾಟೀಲ, ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಸಂಘದ ಶ್ರೀಮತಿ ವಿಜಯಲಕ್ಷ್ಮೀ ಎಂ.ಅಲ್ದಿ, ಸ್ಪಾರ್ಕಲ್ ಗ್ರೂಫ್ ನ ಅನಿತಾರಾವ ಮಂಡ್ಯ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಮಲ್ಲಮ್ಮಾ ಕಡ್ಲಾ, ರೇಶ್ಮಿ ಚಾರಿಟೇಬಲ್ ಟ್ರಸ್ಟ್ ನ ಡಾ.ಭಾರತಿ ಎನ್.ರೇಶ್ಮಿ, ಡಾ.ಶರಣಪ್ಪ ಚವ್ಹಾಣ, ರಾಜಶೇಖರ್, ಲಕ್ಷ್ಮೀಕಾಂತ ಆರ್.ಕೆ.ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಹಿಳಾ ಪ್ರಗತಿಪರ ಚಿಂತಕರ ವೇದಿಕೆ ವತಿಯಿಂದ 65 ಸೀರೆ, ಜಸ್ಟೀಸ್ ಡಾ.ಶಿವರಾಜ ಪಾಟೀಲ ಫೌಂಡೇಶನ್ ವತಿಯಿಂದ 60 ಬ್ಲ್ಯಾಂಕೇಟ್, 15 ರೇಶ್ಮಿ ಸೀರೆ, ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ವತಿಯಿಂದ 21 ಸೀರೆ, ಸ್ಪಾರ್ಕಲ್ ಗ್ರೂಫ್ ವತಿಯಿಂದ 15 ಸೀರೆ, ಸ್ತ್ರೀಶಕ್ತಿ ಒಕ್ಕೂಟದ ವತಿಯಿಂದ 100 ಮಾಸ್ಕ್, ರೇಶ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 12 ಬ್ಲ್ಯಾಂಕೇಟ್, 15 ಸ್ವೀಟ್ ಮತ್ತು ಖಾರದ ಪಾಕೇಟ್ ವಿತರಿಸಲಾಯಿತು.