ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಧನ ವಿತರಣೆ

ಅರಸೀಕೆರೆ, ಜು. ೨೯- ತಾಲ್ಲೂಕು ನಿರಗುಂದ ಸುತ್ತಮುತ್ತಲಿನ ಗ್ರಾಮಗಳ ತಗ್ಗು ಪ್ರದೇಶಗಳಿಗೆ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಹಾನಿಗೊಳಗಾಗಿತ್ತು. ಈ ನೆರೆ ಸಂತ್ರಸ್ತರ ೩೪ ಕುಟುಂಬಗಳಿಗೆ ತಲಾ ೧೦ ಸಾವಿರ ಪರಿಹಾರ ಧನವನ್ನು ಶಾಸಕ ಕೆ.ಎಂ. ಶಿವಲಿಂಗೇಗೌಡ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪ್ರಾಕೃತಿಕ ವೈಪರಿತ್ಯದಿಂದ ಭಾರಿ ಮಳೆ ಸುರಿದು ಒಂದೆಡೆ ರೈತರಿಗೆ ಸಂತೋಷ. ಮತ್ತೊಂದೆಡೆ ಜೀವನ ಕಷ್ಟಕರವಾಗುತ್ತಿದೆ. ಆದ ಕಾರಣ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ಶೀಘ್ರವಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ಕಂದಾಯ ನಿರೀಕ್ಷಕರಾದ ನಟೇಶ್, ನರಗುಂದ ಮತ್ತಿತರರು ಉಪಸ್ಥಿತರಿದ್ದರು.