ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ

ರಾಯಚೂರು.ಏ.೦೨-ಭಾರತ ಸರಕಾರ ಸ್ಥಾಯಿ ಸಂಸ್ಥೆಯಾದ ನೆಹರು ಯುವ ಕೇಂದ್ರ ರಾಯಚೂರು ಭಾರತ ಸೇವಾದಳ ರಾಯಚೂರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಯಚೂರು ಎನ್.ಎಸ್.ಎಸ್. ಘಟಕ, ಹೆಚ್.ಕೆ.ಎಸ್. ಸೊಸೈಟಿ ಎಸ್.ಎಲ್.ಎನ್ ಕಾಲೇಜ್ ಇಂಜಿನಿರಿಂಗ್ ರಾಯಚೂರು ಹಾಗೂ ಶ್ರೀ ಚಾಮುಂಡೇಶ್ವರಿ ಮಹಿಳಾ ಎಸ್.ಎಚ್.ಜಿ. ಇವರ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನೆರೆ ಹೊರೆ ಯುವ ಸಂಸತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾ. ಅಂಬ್ರೇಷ ಪಾಟೀಲ್ ಪ್ರೋಫೆಸರ್ ಇವರು ಮಾತನಾಡುತ್ತ ದೇಶ ಪ್ರೇಮ ದೇಶಭಕ್ತಿ ಯುವಜನರು ಬೆಳೆಸಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಪ್ರಸ್ತಾವಿಕವಾಗಿ ಜಿ.ಎಸ್. ಹಿರೇಮಠ ಲೆಕ್ಕಾಧಿಕಾರಿಗಳು ನೆಹರು ಯುವ ಕೇಂದ್ರ ರಾಯಚೂರು ಇವರು ಮಾತನಾಡುತ್ತ ಪ್ರತಿ ಹಳ್ಳಿಗಳಲ್ಲಿ ಯುವಕ ಸಂಘಗಳನ್ನು ಸ್ಥಾಪಿಸಿ ಗ್ರಾಮ ಅಭಿವೃದಿಯ ಕೆಲಸ ಮಾಡಬೇಕೆಂದರು ಹಾಗೂ ನೆಹರು ಯುವ ಕೇಂದ್ರದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿ ಪ್ರತಿ ಹಳ್ಳಿಗಳಲ್ಲಿ ಯುವಕ-ಯುವತಿ ಸಂಘಗಳನ್ನು ಸ್ಥಾಪಿಸಬೇಕೆಂದು ಕರೆ ನೀಡಿದರು.
ಅಥಿತಿಗಳಾಗಿ ಆಗಮಿಸಿದ ವಿದ್ಯಾಸಾಗರ ಚಿಣಮಗೇರಿ ವಿಭಾಗ ಸಂಘಟಿಕರು ಭಾರತ ಸೇವಾದಳ ರಾಯಚೂರು ಇವರು ಮಾತನಾಡುತ್ತ ಯುವಕರು ರಾಷ್ಟ್ರಧ್ವಜ, ರಾಷ್ಟ್ರಗೀತೆ,ರಾಷ್ಟ್ರಲಾಂಛನ, ಬಗ್ಗೆ ದೇಶಭಕ್ತಿಯನ್ನು ಯುವಕರು ಮೈಗೂಡಿಸಿ ಕೊಳ್ಳಬೇಕೆಂದರು.
ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ ವಿಪಿನ ಕುಮಾರ ವಿಶ್ವ ಸಂಸ್ಥೆಯ ಸ್ವಯಂಸೇವೆಕರು ಹಾಗೂ ಜಿಲ್ಲಾ ಯುವ ಸಮನ್ವಯಾಧಿಕಾರಿಗಳು ನೆಹರು ಯುವ ಕೇಂದ್ರ ರಾಯಚೂರು ಇವರು ಮಾನತಾಡುತ್ತ ಕೇಂದ್ರ ಪುರಸ್ಕೃತ ಯೋಜನೆಗಳು ಮತ್ತು ಅವುಗಳು ಪರಿಣಾಮಕಾರಿಯಾಗಿ ಅನುಷಾನದಲ್ಲಿ ಯುವ ಹಾಗೂ ಸಮುದಾಯ ಸಂಘಟನೆಗಳ ಪಾತ್ರ ಮಹತ್ವವಾಗಿದೆ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಟಿ. ರಾಮಯ್ಯ ನಾಯಕ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರು ಇವರು ಮಾತನಾಡುತ್ತ ಸಮಾಜ ಸೇವೆ ಮಾಡಿದರೆ ದೇಶಸೇವೆ ಮಾಡಿದಂತೆ ಎಲ್ಲಾ ಯುವಜನರು ಸಮಾಜ ಸೇವ ಮಾಡಲು ಮುಂದಾಗ ಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ವಿ.ಎಮ್. ವಿಶ್ವನಾಥ ಪ್ರೋಫೆಸರ್ ಇವರು ಮಾತನಾಡುತ್ತ ಪ್ರಜಾ ಪ್ರಭುತ್ವದಲ್ಲಿ ಸಂಸತ್ತನ್ನು ನಮ್ಮ ಕಾಲೇಜಿನಲ್ಲಿ ನಡೆಸಿಕೊಟ್ಟಿದನ್ನು ನೋಡಿದರೆ ಈಗಿನ ಜನಾಂಗಕ್ಕೆ ಅವಶ್ಯಕತೆ ಇದೆ ಎಂದು ಹೇಳಿದರು.
ಪ್ರಾರ್ಥನೆ ಗೀತೆಯನ್ನು ವಿದ್ಯಾಸಾಗರ ಚಿಣಮಗೇರಿ ವಹಿಸಿದರೆ ಸ್ವಾಗv & ನಿರೂಪಣೆಯನ್ನು ಪ್ರೋ|| ಭಾಗ್ಯಲಕ್ಷ್ಮೀ ನಡೆಸಿಕೊಟ್ಟರು ಕೊನೆಯಲ್ಲಿ ವಿರ್ದ್ಯಾಥಿಗಳು ಸರ್ವರನ್ನು ವಂದಿಸಿದರು.
ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳ್ಳಿಸಿಲಾಯಿತು.