ನೆರೆಪ್ರವಾಹ ಪರಿಹಾರ: ಕೃಷಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆ

ಚಿಂಚೋಳಿ,ಜ.13- ಮಳೆ ಮತ್ತು ನೆರೆಪ್ರವಾಹದ ಪರಿಹಾರ ಹಣ ರೈತರ ಖಾತೆಗೆ ನೇರವಾಗಿ ಜಮಾ ಆಗುವ ರೀತಿಯಲ್ಲಿ ಕೆಲಸ ಮಾಡುವಂತೆ ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ ಅವರು ಸೂಚಿಸಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾದಲ್ಲಿ ಜರುಗಿದ ಚಿಂಚೋಳಿ ತಾಲೂಕಿನ ನೆರೆ ಪರಿಹಾರ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರೈತರ ಪರಿಹಾರ ಸಕಾಲದಲ್ಲಿ ಸಿಗುವಂತೆ ಕ್ರಮ ಕೈಗೊಳ್ಳಿ ಎಂದರು.
ನೆರೆ ಪ್ರವಾಹದಿಂದ ಸಂತ್ರಸ್ತರಾಗಿರುವ ಇಲ್ಲಿಯವರೆಗೂ 2500 ಜನರಿಗೆ ಪರಿಹಾರ ಮೊತ್ತ ಜಮಾಮಾಡಲಾಗಿದೆ ಉಳಿದ ಸಂತ್ರಸ್ಥರಿಗು ಆದಷ್ಟು ಬೇಗ ಪರಹಾರದ ಹಣ ಜಮಾವಾಗಲಿದೆ ಎಂದರು.
ಕಬ್ಬು ಅರಸೀಣ ಬಾಳೆಹಣ್ಣು ಬೆಳೆಗಳ ಪರಿಹಾರ ಅಂಕಿ ಅಂಶಗಳು ಪರಿಗಣಿಸಿ ಅವರೆಲ್ಲರಿಗೂ ಬೆಳೆ ಹಾನಿ ಪರಿಹಾರವನ್ನು ಹಂತ-ಹಂತವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದರು.
ಇಲ್ಲಿನ ತಹಸೀಲ್ಕಾ ಕಾರ್ಯಾಲಯದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಬರಿ ಕುಂಟ್ಟು ನೇಪ ಹೇಳುತ್ತಾರೆ ವಿನಹ ಕೆಲಸ ಮಾತ್ರ ಆಗುವುದಿಲ್ಲ ಎಂಬ ಆರೋಪ ಸಾರ್ವಜನಿಕರದ್ದಾಗಿದೆ ಎಂದ ಪತ್ರಕರ್ತರ ಪ್ರಶ್ನೆಗೆ ಸಹಾಯಕ ಆಯುಕ್ತರು, ವಾರಕ್ಕೊಮ್ಮೆ ಇಲ್ಲಿಗೆ ಭೇಟಿ ನೀಡಿ ಸ್ವತಃ ಈ ಕುರಿತು ಪರಿಶೀಲನೆ ಮಾಡುತ್ತೇನೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಅಧೀಕಾರಿಗಳು ನ್ಯಾಯಯುತವಾಗಿ ಕೆಲಸ ಮಾಡಿ ಎಂದು ಹೇಳಿದರು.
ಒಂದು ವೇಳೆ ಅಧಿಕಾರಿಗಳ ತಪ್ಪು ಮಾಡಿರುವುದು ಕಂಡುಬಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ಅವರು ನೀಡಿದರು.. ಈಗಾಗಲೇ ಚಿಂಚೋಳಿ ತಹಶೀಲ್ದಾರ್ ರವರಿಗೆ ಕರೋನಾ ಸೋಂಕು ಕಾಣಿಸಿಕೊಂಡಿದ್ದೆ ಅವರು ರಜೆಯಮೇಲಿದ್ದಾರೆ. ಹೆಚ್ಚುವರಿ ತಹಸೀಲ್ದಾರ್ ರನ್ನಾಗಿ ಸೇಡಂ ತಹಶೀಲ್ದಾರ್ ರವರನ್ನು ನಿಯೋಜನೆ ಮಾಡಲಾಗಿದೆ. ಗ್ರೇಡ್ 2 ತಹಶೀಲ್ದಾರ್ ಅವರಿಗೂ ಕೂಡ ವರ್ಗಾವಣೆಯಾಗಿದೆ ಅವರ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ನೇಮಕ ಮಾಡುತ್ತಾರೆ ಎಂದ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದರು.
ಸಭೆಯಲ್ಲಿ. ಸೇಡಂ ತಹಶೀಲ್ದಾರ್ ಮತ್ತು ಚಿಂಚೋಳಿಯ ತಹಶೀಲ್ದಾರ್ ಪ್ರಭಾರಿ ಬಸವರಾಜ. ಚಿಂಚೋಳಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಪ್ರಕಾಶ ರಾಠೋಡ. ಕಂದಾಯ ಇಲಾಖೆಯ ಶಿರಸ್ತೆದಾರ ವೆಂಕಟೇಶ ದುಗ್ಗಲ್. ಶಿರಸ್ತೆದಾರ ರಘುನಾಥ. ಕಂದಾಯ ನಿರೀಕ್ಷಕರು ಕೇಶವ ಕುಲಕರ್ಣಿ. ಕಂದಾಯ ನಿರೀಕ್ಷಕರು ಸುಭಾಷ ನಿಡಗುಂದಿ. ಕಂದಾಯ ನಿರೀಕ್ಷಕರು ಆರಿಫ್. ಮತ್ತು ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕೃಷಿ ಇಲಾಖೆ ಎಲ್ಲಾ ತಾಲೂಕಿನ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳು ಸಭೆಯಲ್ಲಿದ್ದರು.