ನೆರವಿಗೆ ನಿಂತ ರವಿ

ಕೊರೊನಾ ಸಂಕಷ್ಟ ಕಾಲದಲ್ಲಿ ಅನೇಕ ಮಂದಿ ಮತ್ತೊಬ್ಬರ ನೆರವಿಗೆ ಧಾವಿಸಿದ್ದಾರೆ. ಅದರಲ್ಲಿಯೂ ಚಿತ್ರರಂಗದಲ್ಲಿರುವ ಕೆಲವು ಮಂದಿ ಸದ್ದಿಲ್ಲದೆ ಜನರ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಟ ಉಪೇಂದ್ರ ,ನಿರ್ದೇಶಕ ಆರ್ ಚಂದ್ರು ನಟರಾದ ನೀನಾಸಂ ಸತೀಶ್, ಸಂಚಾರಿ ವಿಜಯ್ ಸೇರಿದಂತೆ ಚಿತ್ರರಂಗದ ಅನೇಕ ಮಂದಿ ಸದ್ದಿಲ್ಲದೆ ಸಹಾಯ ಮಾಡುತ್ತಿದ್ದಾರೆ.
ಇದೀಗ ಜಿಮ್ ರವಿ ಅವರು ಕೂಡ ಜನರ ನೆರವಿಗೆ ಧಾವಿಸಿ ಅವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.
ಪುರುಷೋತ್ತಮ ಚಿತ್ರದ ಮೂಲಕ ನಾಯಕನಾಗಿ ಕಾಣಿಸಿಕೊಂಡಿರುವ ರವಿಯವರು ಚಿತ್ರರಂಗದ ಜೊತೆಜೊತೆಗೆ ಪೌರಕಾರ್ಮಿಕರು ಆಟೋ ಚಾಲಕರು ಬಸ್ ಚಾಲಕರು, ಅಶಕ್ತರಿಗೆ ನೆರವು ನೀಡುವ ಮೂಲಕ ಅವರ ನೋವು ನಲಿವುಗಳಿಗೆ ಸ್ಪಂದಿಸಿದ್ದಾರೆ.
ನಿತ್ಯ ಕಾಯಕದಲ್ಲಿ ತಲ್ಲೀನರಾಗಿರುವ ಪೊಲೀಸರು ಆಟೋ ಚಾಲಕರು ಸೇರಿದಂತೆ ಅನೇಕರಿಗೆ ದಿನ ವಿದ್ಯಾ ಊಟ ಸರಬರಾಜು ಮಾಡುವ ಮೂಲಕ ಅವರ ಹಸಿವು ನೀಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಗೋರಿ ಪಾಳ್ಯ, ಟಿಂಬರ್ ಲ್ಯಾಂಡ್,ನಾಗರಬಾವಿ ಸೇರಿದಂತೆ ನಗರದ ಅನೇಕ ಕಡೆ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಜೊತೆಗೆ ಜಿಮ್ ಟ್ರೈನರ್ ಮತ್ತು ಫಿಟ್ನೆಸ್ ಸಂಘದ ಮಾಲೀಕರು ಆಗಿರುವ ಜಿಮ್ ನಲ್ಲಿ ಕೆಲಸ ಮಾಡುತ್ತಿರುವ ತರಬೇತಿದಾರರು ಸೇರಿದಂತೆ ಸಿಬ್ಬಂದಿಗೆ ನೆರವು ನೀಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಇದರ ಜೊತೆಜೊತೆಗೆ ಚಿತ್ರರಂಗದಲ್ಲಿರುವ ಕಾರ್ಮಿಕ ಕಲಾವಿದರು ತಂತ್ರಜ್ಞರು ಕೂಡ ನೆರವಾಗಿದ್ದಾರೆ.ಕೊರೋನಾ ಸೋಂಕಿನಿಂದ ಮೃತಪಟ್ಟ ಜನರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಚಿತ್ರರಂಗದ ಮುಂದಿಯ ಕಷ್ಟಕಾಲದ ಆಪದ್ಬಾಂಧವರಾಗಿ ರವಿ ಗುರುತಿಸಿಕೊಂಡಿದ್ದಾರೆ.
ಇನ್ನು ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಪುರುಷೋತ್ತಮ ಚಿತ್ರ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದು ಅಳಿದುಳಿದ ಭಾಗದ ಚಿತ್ರೀಕರಣವನ್ನು ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿದೆ ತಕ್ಷಣ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಈ ಚಿತ್ರಕ್ಕೆ ನಾಯಕನಾಗುವ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ರವಿ.