ನೆರಡಗಂ ಶ್ರೀಮಠದಲ್ಲಿ ಕಾರ್ತಿಕ ದೀಪೋತ್ಸವ ನಾಳೆ

ಸೈದಾಪುರ:ಡಿ.3:ಸಮೀಪದ ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದಲ್ಲಿ ಕಾರ್ತಿಕ ಮಾಸದ ನಿಮಿತ್ತ ಕಾರ್ತಿಕ ದೀಪೋತ್ಸವ ಹಾಗೂ ಈಚೆಗೆ ಲಿಂಗೈಕ್ಯರಾದ ಕಾಯಕಯೋಗಿ, ಕೃಷಿ-ಋಷಿ, ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರ ಗುರು ಸ್ಮರಣೋತ್ಸವ ಕಾರ್ಯಕ್ರಮ ಶನಿವಾರ (ಡಿ-4ಕ್ಕೆ) ಸಂಜೆ 6ಕ್ಕೆ ಜರುಗಲಿದೆ.

ದೀಪೋತ್ಸವದ ಕಾರ್ಯಕ್ರಮದ ಸಾನಿಧ್ಯವನ್ನು ಒಳಬಳ್ಳಾರಿಯ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಅವರು ಭಾಗವಹಿಸಲಿದ್ದಾರೆ. ಜತೆಗೆ ಗುರುಮಠಕಲ್ ಖಾಸಾ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು, ನೆರಡಗಂ ಶ್ರೀಮಠದ ಪೀಠಾಧಿಪತಿಳಾದ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು, ಕಲ್ಲೂರು ಮಠದ ಗುರು ಶಂಭುಲಿಂಗ ಸ್ವಾಮಿಗಳು, ಚೇಗುಂಟಾ ಡಾ. ಕ್ಷೀರಾಲಿಂಗ ಸ್ವಾಮಿಗಳು, ಬಿಜ್ಜಾರದ ಆದಿತ್ಯಪರಾಶ್ರೀ ಸ್ವಾಮಿಗಳು ಸೇರಿದಂತೆ ಕರ್ನಾಟಕ-ತೆಲಂಗಾಣ ಉಭಯ ರಾಜ್ಯಗಳ ಮುಖಂಡರು ಸೇರಿದಂತೆ ಭಕ್ತರು ಭಾಗವಹಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.