ನೆಮ್ಮದಿ ಜೀವನಕ್ಕೆ ಸಮಾಧಾನವೇ ದಾರಿದೀಪ: ಪಟ್ಟದ್ದೇವರು

ಭಾಲ್ಕಿ:ಜ.6: ಸುಖಮಯವಾಗಿ ಜೀವನ ಸಾಗಿಸುವುದಕ್ಕೆ, ಸಮಾಧಾನವೇ ಏಕೈಕ ಮಾರ್ಗವಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಪ್ರತಿಪಾದಿಸಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಲಿಂ| ನಾಗಲಿಂಗ ಸ್ವಾಮಿಗಳ 9ನೇ ಸ್ಮರಣೋತ್ಸವ ನಿಮಿತ್ತಆಯೋಜಿಸಿದ್ದ ದಿನಕೊಮ್ಮೆ ಶರಣನ ನೆನೆದೇನ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ನಾವು ಸಮಾಧಾನದಿಂದರಬೇಕಾದರೆ ನಿತ್ಯಮಲಗುವ ಮುನ್ನ ಶಾಂತ ರೀತಿಯಿಂದ ಓಂ ಶ್ರೀಗುರು ಬಸವಲಿಂಗಾಯ ನಮಃ ಎಂಬಜಪವನ್ನು 21 ಸಲ ಪಠಿಸಬೇಕು. ಇದರಿಂದ ನಮಗೆ ಚನ್ನಾಗಿ ನಿದ್ರೆ ಬರುವುದು. ಯಾವುದೇ ಕೆಟ್ಟಕನಸುಗಳು ಬೀಳುವುದಿಲ್ಲ. ಜಪ ಮಾಡಿದ ನಂತರ ಕೊರಳಲ್ಲಿರುವ ಲಿಂಗಕ್ಕೆ ನಮಿಸಿ ಮಲಗಬೇಕು. ನಂತರ ಸೂರ್ಯೋದಯಕ್ಕಿಂತ ಮುಂಚೆ ಎದ್ದು,ಲಿಂಗಕ್ಕೆ ನಮಸ್ಕರಿಸಿ ಜೀವನ ಪ್ರಾರಂಭಿಸಬೇಕು.ಅಂದಾಗ ಮಾತ್ರ ನಮ್ಮ ಜೀವನ ಸಮಸ್ಥಿತಿಯಲ್ಲಿರಲು ಸಾಧ್ಯ ಎಂದರು.
ಬಸವಲಿಂಗ ದೇವರು ನೇತೃತ್ವ ವಹಿಸಿದ್ದರು. ಪ್ರಾಂಶುಪಾಲ ಅಶೋಕ ರಾಜೋಳೆ ಕಾರ್ಯಕ್ರಮಉದ್ಘಾಟಿಸಿದರು. ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ ಗ್ರಂಥ ಲೋಕಾರ್ಪಣೆ ಮಾಡಿದರು. ರಾಜು ಜುಬರೆಮಾತನಾಡಿದರು. ವಚನ ಸಾಹಿತ್ಯ ಅಕಾಡೆಮಿ ಜಿಲ್ಲಾಧ್ಯಕ್ಷ ನಿರಂಕಾರ ಬಂಡಿ ವಿಶೇಷ ಉಪನ್ಯಾಸ ಮಂಡಿಸಿದರು.

ಪ್ರೇಮಲಾ ತೊಂಡಾರೆ, ಮಹಾನಂದ ದೇಶಮುಖ, ರಾಮಲಿಂಗಪ್ಪಾ ಪುರಾನೆ, ಪ್ರಭಾಕರ ಬೆಳಕೇರೆಉಪಸ್ಥಿತರಿದ್ದರು. ಸಂತೋಷ ಹಡಪದ ಸ್ವಾಗತಿಸಿದರು.ಮಂಜುನಾಥ ಬೆಳೆಕೇರೆ ನಿರೂಪಿಸಿದರು. ಶಾಂತಯ್ನಾ ಸ್ವಾಮಿ ವಂದಿಸಿದರು.