
ಇಂಡಿ: ಜು.12:ಜನಸಂಖ್ಯೆಯ ಹೆಚ್ಚಳದಿಂದ ನಮ್ಮ ಪರಿಸರವು ಹಾಳಾಗುವ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳು ವಿರಳವಾಗಿ, ನಮ್ಮ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಗಳ ವತಿಯಿಂದ ಹಮ್ಮಿಕೊಂಡ ವಿಶ್ವ ಜನಸಂಖ್ಯಾ ದಿನವನ್ನು ಉದ್ದೇಶಿಸಿ ಮಾತನಾಡಿದರು.
ಭವಿಷ್ಯದ ಪೀಳಿಗೆ ಉಳಿಯಲು ಪ್ರಕೃತಿಯನ್ನು ಸಂರಕ್ಷಿಸುವುದು ಬಹು ಮುಖ್ಯ. ಇಂದು ಜಗತ್ತು ಎದುರಿಸುತ್ತಿರುವ ಅತ್ಯಂತ ನಿರ್ಣಾಯಕ ಸಮಸ್ಯೆಗಳಲ್ಲಿ ಒಂದಾದ ಅತಿಯಾದ ಜನಸಂಖ್ಯೆಗೆ ಗಂಭೀರವಾದ ಗಮನ ಬೇಕು ಇಲ್ಲದಿದ್ದರೆ ಬದುಕಲು ತುಂಬಾ ಕಷ್ಟವಾಗುತ್ತದೆ ಎಂದು ಹೇಳಿದರು.
ಕೆಜಿಎಸ್ ಶಾಲೆಯ ಮುಖ್ಯ ಶಿಕ್ಷಕಿ ವಿ ವೈ ಪತ್ತಾರ ಮಾತನಾಡಿ,ಜನಸಂಖ್ಯೆಯ ಬೆಳವಣಿಗೆಯು ನಿರುದ್ಯೋಗ, ಬಡತನ, ಹೆಚ್ಚುತ್ತಿರುವ ಜಾಗತಿಕ ತಾಪಮಾನ, ಅರಣ್ಯನಾಶದಂತಹ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ, ಆರೋಗ್ಯವನ್ನು ಸುಧಾರಿಸುವ ಮೂಲಕ, ಮಹಿಳೆಯರ ಸಬಲೀಕರಣದಿಂದ, ಜನಸಂಖ್ಯೆಯ ಸಮಸ್ಯೆಯನ್ನು ಕಡಿಮೆ ಮಾಡಲು ಸಾಧ್ಯ. ನಮ್ಮ ಮುಂಬರುವ ಪೀಳಿಗೆಯನ್ನು ವಿದ್ಯಾವಂತರನ್ನಾಗಿಸಿ ಮತ್ತು ಹೊಸ ಆಲೋಚನೆಗಳಿಂದ ಸಮೃದ್ಧಗೊಳಿಸಬೇಕಾಗಿದೆ ಎಂದು ಹೇಳಿದರು.
ಶಿಕ್ಷಕರಾದ ಎಸ್ ಎಸ್ ಅರಬ, ಎಸ್ ಪಿ ಪೂಜಾರಿ, ಎಸ್ ಡಿ ಬಿರಾದಾರ, ಎಸ್ ಬಿ ಕುಲಕರ್ಣಿ, ಎಸ್ ಆರ್ ಚಾಳೇಕರ, ಎಸ್ ಎಂ ಪಂಚಮುಖಿ, ಜೆ ಎಂ ಪತಂಗಿ,ಸಾವಿತ್ರಿ ಸಂಗಮದ, ಜೆ ಸಿ ಗುಣಕಿ, ಎಂ ಎಂ ಪತ್ತಾರ, ಸುರೇಶ ದೊಡ್ಯಾಳಕರ, ಯಲ್ಲಮ್ಮಸಾಲೋಟಗಿ, ಆಶಾ ಕೋರಳ್ಳಿ ಉಪಸ್ಥಿತರಿದ್ದರು.