ನೆಮ್ಮದಿಯ ಬದುಕಿಗೆ ಸಂಗೀತ ಅವಶ್ಯ: ಪ್ರಭಾಕರ ರಾಮಜೀ

ಕಲಬುರಗಿ,ಅ.25-ಇಂದಿನ ಅವಸರದ, ಒತ್ತಡದ ಬದುಕಿಗೆ ಸಂಗೀತ, ಸಾಹಿತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಮಾಡ್ಯಾಳ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪ್ರಭಾಕರ ರಾಮಜೀ ಅವರು ಹೇಳಿದರು.
ಆಳಂದ ತಾಲ್ಲೂಕಿನ ಮಾಡ್ಯಾಳ ಗ್ರಾಮದ ಜಗದಂಬಾ ದೇವಿ ದೇವಸ್ಥಾನದ ಆವರಣದಲ್ಲಿ ಗೊಬ್ಬುರ (ಬಿ) ಗ್ರಾಮದ ಯಡಿಯೂರ ಸಿದ್ಧಲಿಂಗೇಶ್ವರ ಸಾಂಸ್ಕøತಿಕ ಕಲಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ದಸರಾ ವೈಭವ ಸಂಗೀತ, ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಧಾವಂತದ ಬದುಕಿಗೆ ಸಂಗೀತ, ಸಾಹಿತ್ಯ ಅತ್ಯಂತ ಅವಶ್ಯವಾಗಿವೆ ಎಂದರು.
ಶಿಕ್ಷಕ ಮಲ್ಲಿನಾಥ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಸಂಗೀತ, ಸಾಹಿತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಅಗತ್ಯವಾಗಿವೆ. ಮನುಷ್ಯ ನೆಮ್ಮದಿಯಿಂದ ಬದುಕಲು ಸಂಗೀತ ಆಲಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶ್ರೀಶೈಲ ಮಡ್ಡಿತೋಟ, ಬಸವರಾಜ ಧೋತ್ರೆ, ಸಿದ್ಧರಾಮ ನಿಂಬಾಳ, ಸಿದ್ಧರಾಮ ಹೂಗಾರ, ಪರಮೇಶ್ವರ ರಾಯಚೂರ, ರವಿಕುಮಾರ ಮಡ್ಡಿ, ಗುಂಡಪ್ಪ ಕ್ಷತ್ರಿ, ಶಿವಾನಂದ ಧೋತ್ರೆ ಆಗಮಿಸಿದ್ದರು. ಬಸವರಾಜ ದೇನೆಕರ ಸೇರಿದಂತೆ ಗ್ರಾಮದ ಗಣ್ಯರು, ಹಿರಿಯರು ಉಪಸ್ಥಿತರಿದ್ದರು.
ದಸರಾ ವೈಭವ ಸಂಗೀತ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕಲಾವಿದರಾದ ವೀರುಪಾಕ್ಷಯ್ಯ ಗವಾಯಿಗಳು ಗೌಡಗಾಂವ, ತಬಲಾ ವಾದನ ಸುರೇಶ ಆಳಂದ, ಸಂತೋಷಕುಮಾರ, ಬಸವರಾಜ, ಶ್ರೀಶೈಲ ಸೇರಿದಂತೆ ಮುಂತಾದವರು ಸಂಗೀತ ಸೇವೆ ಸಲ್ಲಿಸಿದರು. ಸಂಘದ ಅಧ್ಯಕ್ಷ ಶಿವಲಿಂಗ ಶಾಸ್ತ್ರಿ ಪುರಾಣಿಕಮಠ ಗರೂರ ಉಪಸ್ಥಿತರಿದ್ದರು.