ನೆಮ್ಮದಿಯ ಬದುಕಿಗೆ ಧಮ್ಮದೀಪ ರಹದಾರಿ

ಕಲಬುರಗಿ :ಸೆ.5: ಸಮಾಜದಲ್ಲಿ ಶಾಂತಿ ನೆಲೆಸಲು ಬುದ್ದನ ತತ್ವಗಳು ಇಂದು ಅವಶ್ಯಕವಾಗಿವೆ. ಮನೆಮನೆಯಲ್ಲಿ ಧಮ್ಮದೀಪ ಆಯೋಜನೆಯ ಮೂಲಕ ಆಧುನಿಕತೆಯ ಭರಾಟೆಯ ಗಡಿಬಿಡಿ ಜೀವನಕ್ಕೆ ಬುದ್ದನ ವಿಚಾರಧಾರೆಗಳು ತಿಳಿಸುವ ಮೂಲಕ ನೆಮ್ಮದಿ ನಿಡಲು ಈ ಧಮ್ಮದೀಪ ರಹದಾರಿಯಾಗಲಿದೆ ಕಾರ್ಯಕ್ರಮ ಎಂದು ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರರಾದ ಸುರೇಶ ಶರ್ಮಾ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ದೇವಿಂದ್ರಪ್ಪ ಜಿಸಿ ಸಂಗಿತ ಸಾಹಿತ್ಯ ಕಲಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವರ್ಷಾವಾಸ ನಮ್ಮ ನಡೆ ಬುದ್ಧನಡೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ ಎಸ್‍ಸಿಎಸ್ಟಿ ಸಮುದಾಯ ಧಮ್ಮ ಅರಿಯುವ ಮೂಲಕ ಜಾಗೃತರಾಗಬೇಕಾಗಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಸಿದ್ದಾರ್ಥ ಚಿಮ್ಮಾ ಇದ್ದಾಯಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಧಮ್ಮಜ್ಯೋತಿ ಭಂತೆ, ಪೆÇ್ರ. ವಿ.ಟಿ. ಕಾಂಬಳೆ, ಸುಧೀರ ಸಂಗೋಳಗಿ, ಸಂಧ್ಯಾ ಕಾನೇಕರ್, ಶಂಕರ ಕೋಡ್ತಾ, ಸೂರ್ಯಕಾಂತ ಮಾಲೆ, ಅರ್ಜುನ ಭದ್ರೆ, ಡಾ. ಕೆ.ಎಸ್. ಬಂದು ಸೇರಿದಂತೆ ಮತ್ತಿತರರಿದ್ದರು. ಈ ಸಂದರ್ಭದಲ್ಲಿ ಎಸ್.ಬಿ ಹರಿಕೃಷ್ಣ, ಪುಂಡಲಿಕ ಹೇರೂರ, ಮಡಿವಾಳ ದೊಡ್ಡಮನಿ, ತುಕಾರಾಮ ತಳವಾರ, ಸುಭಾಷ ಚಕ್ರವರ್ತಿ, ಸುರೇಶ, ಕುಸುಮಕರ್, ಎಂ.ಬಿ. ನಿಂಗಪ್ಪ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.