ನೆಪಕ್ಕೆ ಮಾತ್ರ ಕುಡಿಯುವ ನೀರಿನ ಅರವಟ್ಟಿಗೆ!


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮಾ.28: ಬೇಸಿಗೆ ಬಿಸಿಲು ಹೆಚ್ಚಾದ ಪರಿಣಾಮವಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚನೆಯ ಹಿನ್ನೆಲೆ ಪಟ್ಟಣ ಪಂಚಾಯಿತಿ ವತಿಯಿಂದ ಎರಡು ಕಡೆಯಲ್ಲಿ ಕುಡಿಯಲು ನೀರಿನ  ಅರವಟ್ಟಿಗೆಯ ವ್ಯವಸ್ಥೆ ಮಾಡಿದ್ದು ಇದು ನೆಪಕ್ಕೆ ಮಾತ್ರ  ಎಂಬಂತೆ‌ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಹೌದು ಪಟ್ಟಣದ ಪಟ್ಟಣ ಪಂಚಾಯಿತಿ ಮುಂಭಾಗ ಹಾಗೂ ಉಜ್ಜಿನಿ ಸರ್ಕಲ್ ನ ಬಳಿ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಮುಂಜಾನೆ ಎರಡು ಗಡಿಗೆಯಲ್ಲಿ ಮಾತ್ರ ನೀರು ಶೇಖರಣೆ ಮಾಡಲಾಗುತ್ತದೆ, ಹೆಚ್ಚಿನ ಬಿಸಿಲು ಇರುವುದರಿಂದ ಸಾರ್ವಜನಿಕರು ಹೆಚ್ಚಾಗಿ ನೀರು ಕುಡಿಯುತ್ತಿದ್ದು, ಗಡಿಗಿಯಲ್ಲಿನ ನೀರು ಮದ್ಯಾಹ್ನ ನ ಹೊತ್ತಿನಲ್ಲಿ ಖಾಲಿಯಾಗುತ್ತವೆ, ನಂತರ  ಬಾಯಾರಿಕೆಯಿಂದ ಬಂದ ಸಾರ್ವಜನಿಕರು ಗಡಿಗೆಯನ್ನು ಇಣುಕಿ ನೋಡಿ ನೀರಿಲ್ಲದ ಪರಿಣಾಮವಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೋಗುತ್ತಿದ್ದಾರೆ, ಪಟ್ಟಣ ಪಂಚಾಯಿತಿಯವರು ಹೆಚ್ಚಿನ ಕ್ಯಾನ್ ಗಳ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಪ್ಪು ಅಭಿಮಾನಿ ಬಳಗದ ವತಿಯಿಂದ ಬಸ್ ನಿಲ್ದಾಣ ಬಳಿ ಕುಡಿಯುವ ನೀರಿನ ಅರವಟ್ಟಿಗೆಯನ್ನು ನಿರ್ಮಿಸಲಾಗಿದ್ದು, ಇಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ನಿರ್ಮಿಸಲಾಗಿದೆ. ಆದರೆ ಪಟ್ಟಣ ಪಂಚಾಯಿತಿ ವತಿಯಿಂದ ಉಜ್ಜಿನಿ ಸರ್ಕಲ್ ಬಳಿ ಕುಡಿಯುವ ನೀರಿನ ಅರವಟ್ಟಿಗೆ ನಿರ್ಮಿಸಲಾಗಿದ್ದು, ಮಧ್ಯಾಹ್ನದ ಸಮಯದಲ್ಲಿ ನೀರು ಕುಡಿಯಲು ಹೋದರೆ ಖಾಲಿಯಾಗಿರುತ್ತವೆ, ನೆಪಕ್ಕೆ ಮಾತ್ರ ಕುಡಿಯುವ ನಿರಿನ ಅರವಟ್ಟಿಗೆ ನಿರ್ಮಿಸಲಾಗಿದೆ ಎಂಬಂತಾಗಿದೆ.
 ಪ್ರಜ್ಞಾವಂತ ನಾಗರಿಕರು