ಕೋಲಾರ,ಸೆ,೨೭:ಜನತಾದರ್ಶನ ಕಾರ್ಯಕ್ರಮವು ನಾಮಕಾವಸ್ತೆಯಾಗಿ ನಡೆಯಿತು. ಸಾರ್ವಜನಿಕರಿಂದ ೫೭೩ ಅರ್ಜಿಗಳ ಸ್ವೀಕಾರ ಸಚಿವರಿಂದ ಅಗಿದ್ದು ಹೊರತು ಪಡೆಸಿ ಹೊರತಾಗಿ ಇಲಾಖೆಯ ಅಧಿಕಾರಿಗಳಿಂದ ಯಾವೂದೇ ಸ್ಪಂದನೆಗಳು ಸಿಕ್ಕಿಲ್ಲ,
ಜನತಾದರ್ಶನ ಸಂಪೂರ್ಣ ವಿಫಲವಾಗಿದೆ. ಕರ್ನಾಟಕದಲ್ಲಿ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠನಕ್ಕೆ ತರುವುದಕ್ಕೆ ಸರ್ಕಾರಕ್ಕೆ ಬಿಡುವಿಲ್ಲ ಇನ್ನು ಅಭಿವೃದ್ದಿ ಯೋಜನೆಗಳು ಇನ್ನೆಲ್ಲಿಂದ ಬರಬೇಕೆಂದು ಸಂಸದ ಎಸ್.ಮುನಿಸ್ವಾಮಿ ಪ್ರಶ್ನಿಸಿದರು,
ನಗರದಲ್ಲಿ ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಅವರಣದಲ್ಲಿನ ತಮ್ಮ ಕಚೇರಿಯಲ್ಲಿ ಮಾದ್ಯಮದವರೊಂದಿಗೆ ಅವರು ಮಾತನಾಡುತ್ತಾ ಇದೊಂದು ಗಿಮಿಕ್ ರಾಜಕಾರಣ, ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ದೆಸೆಯಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು,
ಶ್ರೀನಿವಾಸಪುರ ಅರಣ್ಯ ಇಲಾಖೆಯಿಂದ ರೈತರನ್ನು ಭಯೋತ್ಪಾದಕರಂತೆ, ಉಗ್ರಗಾಮಿಗಳಂತೆ ಬಿಂಬಿಸುವ ರೀತಿ ಅವರ ತೋಟದ ಹೊಲ ಗದ್ದೆಗಳ ಮೇಲೆ ಮಧ್ಯರಾತ್ರಿ ಪೊಲೀಸರನ್ನು ಮುಂದಿಟ್ಟು ಕೊಂಡು ಯುದ್ದ ಮಾದರಿಯಲ್ಲಿ ದಾಳಿ ಮಾಡಿ ಮರಗಿಡಗಳನ್ನು ಬೆಳೆಗಳನ್ನು ನಾಶ ಪಡೆಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು ರೈತರು ಇಂದು ತಮ್ಮ ಆಸ್ತಿಪಾಸ್ತಿಗಳನ್ನು ಕಳೆದು ಕೊಂಡು ಬೀದಿಗೆ ಬಿದ್ದಿದ್ದು ದಯಾಮರಣ ಕೋರಿದ್ದಾರೆ. ಹಲವಾರು ಮಂದಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾರೆ, ಗ್ರಾಮದಲ್ಲಿ ಒಂದು ಸಾವಿರ ಮಂದಿ ಪುರುಷರಿದ್ದರೆ ಅಷ್ಟು ಮಂದಿ ಮೇಲೆ ಕೇಸು ದಾಖಲು ಮಾಡುವ ಮೂಲಕ ಅಧಿಕಾರವನ್ನು ದುರ್‍ಬಳಿಸಿ ಕೊಂಡು ಅಮಾಯಕ ರೈತರನ್ನು ಬೆದರಿಸುತ್ತಿದ್ದಾರೆ. ಆ ಗ್ರಾಮಕ್ಕೆ ನಾನು ಬರುತ್ತೇನೆ ನೀವು ಧೆರ್ಯವಾಗಿ ಬನ್ನಿ ಏನು ಮಾಡುತ್ತಾರೆ ನೋಡೋಣಾ ಎಷ್ಟು ಮಂದಿಯನ್ನು ಜೈಲಿಗೆ ಅಟ್ಟುತ್ತಾರೆಂದು ನೋಡಿ ಬಿಡೋಣಾ ಎಂದು ಸವಾಲ್ ಹಾಕಿದರು,
ಈತ ಈ ಹಿಂದೆ ಸ್ಟಾಂಪ್‌ವೆಂಡರ್ ಅಗಿದ್ದು ರೈತರಿಗೆ ಮಾಡಿದ ಮೋಸದ ಹಿನ್ನಲೆಯಲ್ಲಿ ಬಟ್ಟೆ ಬಿಚ್ಚಿ ಕತ್ತೆ ಮೇಲೆ ಮೆರವಣಿಗೆ ಮಾಡಿದ್ದನ್ನು ಈಗಾಲು ಬಂಗಾರಪೇಟೆ ಜನತೆ ಮಾತನಾಡುತ್ತಾರೆ. ಸರ್ಕಾರಿ ಜಮೀನು ಈತನ ತಾಯಿ ಹೆಸರಿಗೆ ಮಾಡಿ ಪಾಪಾ ಅವರನ್ನು ತಗುಲಿ ಹಾಕಿದ್ದಾನೆ, ಈತ ತಾನು ಸರ್ಕಾರಿ ಜಮೀನು ಗುಳಂ ಮಾಡಿಲ್ಲ ಎಂಬುವುದಾದರೇ ರೂಜುವಾತು ಮಾಡಿಸಲಿ ಅದು ಬಿಟ್ಟು ಈ ರೀತಿ ವೇದಿಕೆಗಳಲ್ಲಿ ಬಟ್ಟೆಗಳು ಹರಿದು ಕೊಳ್ಳುವುದೇಕೆ ಎಂದು ವ್ಯಂಗವಾಡಿದರು,