ನೆನೆಸುವ ಮನದ ಮಹಾಜ್ಯೋತಿ ಸಿದ್ದಗಂಗಾಶ್ರೀ:ಶಿವಪ್ರಕಾಶಶ್ರೀ

ತಾಳಿಕೋಟೆ:ಜ.22:ದಾಸೋಹ ಪರಂಪರೆ ಎಂಬುದು ಶ್ರೀ ಬಸವಣ್ಣನವರ ಕಾಲದಿಂದಲೂ ಸಾಗಿಬಂದಿದೆ ಅಂದು ಬಸವಣ್ಣನವರು 1 ಲಕ್ಷ 96 ಸಾವಿರ ಜಂಗಮರಿಗೆ ಏಕಕಾಲಕ್ಕೆ ದಾಸೋಹ ವ್ಯವಸ್ಥೆ ಕಲ್ಪಿಸಿ ಉಣಬಡಿಸುವ ಕಾರ್ಯಕೈಗೊಂಡು ಮಹಾದಾಸೋಹಿ ಭಕ್ತಿ ಬಂಡಾರ ಬಸವಣ್ಣನವರಾಗಿದ್ದಾರೆಂದು ಬ.ಬಾಗೇವಾಡಿ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಶನಿವಾರರಂದು ಶ್ರೀ ಕುಮಾರೇಶ್ವರ ಜೀವನ ವಿಕಾಸ ಪೌಂಡೇಶನ್ ಮುದ್ದೇಬಿಹಾಳ, ಸಿ.ಬಿ.ಅಸ್ಕಿ ಪೌಂಡೇಶನ್ ಕೊಣ್ಣೂರ ಇವರ ಸಹಯೋಗದೊಂದಿಗೆ ಸ್ಥಳೀಯ ಶ್ರೀ ವಿಠ್ಠಲ ಮಂದಿರದಲ್ಲಿ ಏರ್ಪಡಿಸಲಾದ ವಿಶ್ವದಾಸೋಹ ದಿನಾಚರಣೆ ಕಾರ್ಯಕ್ರಮದಲ್ಲಿ ಹಾನಗಲ್ ಶ್ರೀ ಕುಮಾರೇಶ್ವರ ಮಹಾಸ್ವಾಮಿಗಳ, ತ್ರಿವಿದಿ ದಾಸೋಹಿ ಶತಾಯುಷಿ ತುಮಕೂರಿನ ಶ್ರೀಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳ ಹಾಗೂ ವಿಜಯಪುರ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ, ತಾಳಿಕೋಟೆಯ ಶ್ರೀ ವಿರಕ್ತ ಮಹಾಸ್ವಾಮಿಗಳ ಸ್ಮರಣೋತ್ಸವದಲ್ಲಿ ಉಭಯಶ್ರೀಗಳವರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದು ಮಾತನಾಡುತ್ತಿದ್ದ ಶ್ರೀಗಳು ದಾಸೋಹ ಅಂದರೆ ಲಗ್ನ ಮೋಹರ್ತಗಳಲ್ಲಿ ಮಾಡುವ ಊಟಕ್ಕೆ ದಾಸೋಹ ಅನ್ನುವದಿಲ್ಲಾ ನಿರ್ಗತಿಕರಿಗೆ, ಬಡವರಿಗಾಗಿ ಉಣಬಡಿಸುವ ಸೇವಾ ಕಾರ್ಯಕ್ಕೆ ದಾಸೋಹವೆನ್ನುತ್ತಾರೆ ಅಂತಹ ದಾಸೋಹ ಕಾರ್ಯಕ್ಕೆ ಅಸ್ಕಿ ಪೌಂಡೇಶನ್‍ದ ಸಿ.ಬಿ.ಅಸ್ಕಿ ಅವರು ವಿಶ್ವ ದಾಸೋಹ ದಿನಾಚರಣೆಗೆ ಕೈಜೋಡಿಸಿ ಶ್ರೀಗಳನ್ನು ತಮ್ಮ ದಾಸೋಹ ಸೇವೆಯಲ್ಲಿ ಕಂಡಿದ್ದಾರೆಂದರು. ಭಕ್ತರಿಗೆ ಸಾಕ್ಷೀಯಾದ ಶ್ರೀ ಖಾಸ್ಗತರು ಹಾಗೂ ಪಾಂಡಿತ್ಯದ ಮೂಲಕ ಜ್ಞಾನದ ದೀಪ ಹಚ್ಚಿದ ಸಿದ್ದೇಶ್ವರಶ್ರೀಗಳವರಲ್ಲಿಯ ನಡೆ ನುಡಿಗಳು ಆಚರಣೆಗೆ ಬರಬೇಕು ಅಂದರೆ ದಾಸೋಹ ವ್ಯವಸ್ಥೆ ಎಂಬುದು ಸಾರಾಗವಾಗಿ ನಡೆಯುತ್ತದೆ ಎಂದರು.

ಇನ್ನೋರ್ವ ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ಮಾತನಾಡಿ ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಅವರು ಮಾಡಿದ ದಾಸೋಹ ಪ್ರತಿ ಜನರಿಗೂ ತಲುಪಿದೆ ಅಂತಹ ಕಾರ್ಯವನ್ನು ಲಕ್ಷೀಸಿದ ಸರ್ಕಾರ ವಿಶ್ವದಾಸೋಹ ದಿನಾಚರಣೆಯನ್ನು ಮಾಡುತ್ತಿದೆ ಎಂದರು. ದಾಸೋಹ ವ್ಯವಸ್ಥೆ ಜಾರಿಗೆ ತರುವಲ್ಲಿಯೂ ವೀರಶೈವ ಲಿಂಗಾಯತವು ಒಂದಾಗಿದೆ ದಾಸೋಹ ಎಂದರೆ ಸ್ವತಃ ತಾವೇ ಬಿತ್ತಿ ಬೆಳೆದು ವಿಧ್ಯಾರ್ಥಿ ಜೀವನಕ್ಕೂ ಅನುಕೂಲ ಕಲ್ಪಿಸುವಂತಹ ಕಾರ್ಯ ಮಾಡಿದ ಸಿದ್ದಗಂಗಾಶ್ರೀಗಳ ಹಾಗೂ ಅನ್ನ ಸಂಗೀತ ಶಿಕ್ಷಣ ನೀಡಿದ ಶ್ರೀ ಖಾಸ್ಗತರ ಕಾರ್ಯಕ್ಕೆ ದಾಸೋಹವೆನ್ನುತ್ತಾರೆಂದು ಕೊಪ್ಪಳ ಗವಿ ಮಠದಲ್ಲಿ ನಡೆದ ಪವಾಡ ದೃಶ್ಯ ಘಟನೆಯನ್ನು ವಿವರಿಸಿದ ಶ್ರೀಗಳು ನೂರು ವರ್ಷ ಜ್ಞಾನ ನೀಡುವಂತಹ ಜ್ಞಾನದ ಜ್ಯೋತಿ ಬೆಳಗಿಸಿದವರು ಸಿದ್ದಶ್ವರ ಶ್ರೀಗಳು ಆಗಿದ್ದಾರೆಂದರು.

    ಇನ್ನೋರ್ವ ಶ್ರೀ ಕುಮಾರೇಶ್ವರ ಜೀವನ ವಿಕಾಸ ಪೌಂಡೇಶನ್‍ದ ಸಂಸ್ಥಾಪಕ ಕುಂಟೋಜಿ ಹಿರೇಮಠದ ಶ್ರೀ ಡಾ.ಚನ್ನವೀರ ದೇವರು ಮಾತನಾಡಿ ಸಿದ್ದಗಂಗಾಶ್ರೀಗಳವರ ಸಿದ್ದೇಶ್ವರ ಶ್ರೀಗಳವರ ಇತಿಹಾಸ ದೇಶದ ಎಲ್ಲ ಶಾಲಾ ಪಠ್ಯ ಪುಸ್ತಕದಲ್ಲಿ ಅಳವಡಿಸುವ ಕಾರ್ಯವಾಗಬೇಕು ಅವರ ಇತಿಹಾಸ ಅವರನಡತೆ ಅವರ ವಿಚಾರಧಾರೆಯನ್ನು ವಿದ್ಯಾರ್ಥಿಗಳು ಕಲಿಯುವಂತಾಗಲಿ ಎಂಬುದರ ಕುರಿತು ಸರ್ಕಾರ ಗಮನ ಹರಿಸಬೇಕೆಂದ ಶ್ರೀಗಳು ಇಂದು ದೇಶದಲ್ಲಿ ಕೇಸರಿಯ ಗುರುತು ಉಳಿದುಕೊಂಡಿದೆ ಎಂದರೆ ಅದಕ್ಕೆ ಮುಖ್ಯಕಾರಣ ಛತ್ರಪತಿ ಶಿವಾಜಿ ಮಹಾರಾಜರು ಗುರು ರಾಮದಾಸ ಮಹಾರಾಜರು ಆಗಿದ್ದಾರೆ. ಕೇಸರಿಯ ದ್ವಜ ಎಲ್ಲವರೆಗೆ ಕಾಣುತ್ತದೆಯೋ ಅಲ್ಲಿಯವರೆಗೆ ದೇಶ ಎಂಬ ಭಾವನೆ ಅವರಲ್ಲಿತ್ತೆಂದ ಶ್ರೀಗಳು ರಾಜಕಾರಣಿಗಳಿಗೆ, ವಿದ್ಯಾಧಾನ ಮಾಡುವ ಕಾರ್ಯ ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯ ಮಠಗಳಲ್ಲಿಯ ಸುಜ್ಞಾನಿಗಳಿಂದ ಎಂದು ಅಜ್ಞಾನಿ, ಸುಜ್ಞಾನಿ ಬೆಳೆದು ಬಂದ ಬೆಳೆಯುತ್ತಿರುವ ಭಕ್ತರ ವಿಚಾರಗಳ ಕುರಿತು ಭಹುಮಾರ್ಮಿಕವಾಗಿ ವಿವರಿಸಿದರು.

ಜಡಿಮಠದ ಶ್ರೀಗಳು, ಕಮತಗಿಯ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳು, ಕೆಸರಟ್ಟಿ ಸೋಮಲಿಂಗ ಮಹಾಸ್ವಾಮಿಗಳು, ಪಡೇಕನೂರ, ದಾಸೋಹ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ ಇಂದು ಆಚರಿಸುತ್ತಿರುವ ವಿಶ್ವ ದಾಸೋಹ ದಿನಾಚರಣೆಯಲ್ಲಿ ಮಹಾ ಪೂಜೆ ಗೈಯಲಾದ ಎಲ್ಲ ಶ್ರೀಗಳು ಹುಟ್ಟುತ್ತಲೇ ದೊಡ್ಡವರೆನಿಸಿಕೊಂಡು ಬಂದವರಾಗಿದ್ದಾರೆ ಇಂತಹ ಕೋಟಿ ಕೋಟಿ ಮಹಾತ್ಮರನ್ನು ಕಳೆದುಕೊಂಡಿದ್ದೇವೆ ನಮ್ಮ ಭಾವ, ನಮ್ಮ ಬಧುಕು, ನಮ್ಮ ಜೀವನವನ್ನು ಗುರುತಿಸಿಕೊಳ್ಳುವಂತೆ ಹೇಗೆ ಮಾಡಿ ಹೋಗಿದ್ದಾರೆಂದು ನೆನಪಿಸಿಕೊಳ್ಳುವಂತಹದ್ದಾಗಿದೆ ಎಲ್ಲ ಮಹಾತ್ಮರು ನಮ್ಮನ್ನು ಅಗಲಿ ಹೋಗಿದ್ದರ ಕುರಿತು ಪೂಜೆ ಮಾಡಿದರೆ ಸಾಲದು ಅವರು ಮಾಡಿದಂತಹ ಅನ್ನ ದಾಸೋಹದಂತಹ ಸಹಾಯ ಹಸ್ತ ಕಾರ್ಯಕ್ಕೆ ಎಲ್ಲರು ಮುಂದಾಗಬೇಕಾಗಿದೆ ಎಂದರು.

ಸುಮಾರು 4, 5 ಸಾವಿರ ಜನತೆಗೆ ದಾಸೋಹ ವ್ಯವಸ್ಥೆ ಕಲ್ಪಿಸಿ ಕಾರ್ಯಕ್ರಮದ ಯಶಸ್ವಿಗೆ ಮುಂದಾದ ಅಸ್ಕಿ ಪೌಂಡೇಶನ್‍ದ ಅಧ್ಯಕ್ಷರಾದ ಸಿ.ಬಿ.ಅಸ್ಕಿ ಅವರು ಮಾತನಾಡಿ ವಿಶ್ವ ದಾಸೋಹ ಆಚರಣೆ ಆಚರಿಸುವ ಕುರಿತು ಈ ಹಿಂದೆ ಕುಂಟೋಜಿಯ ಡಾ.ಚನ್ನವೀರ ಮಹಾಸ್ವಾಮಿಗಳು ನನ್ನ ಜೊತೆ ಸಂಪರ್ಕಿಸಿ ತಿಳಿ ಹೇಳಿದ್ದರು ಅವರ ಅನುಮತಿಯಂತೆ ದಾಸೋಹ ವ್ಯವಸ್ಥೆಯಲ್ಲಿ ಕಲ್ಪಿಸಿದ್ದೇನೆ ಈ ಕಾರ್ಯವನ್ನು ನಾನು ಮಾಡಿರುವೆ ಎಂದು ಹೇಳಲಾಗದು ಇದರಲ್ಲಿ ಎಲ್ಲ ಶ್ರೀಗಳ ತಾಳಿಕೋಟೆ ಗಣ್ಯ ಮಾನ್ಯರಿಗೆ ಸಲ್ಲುತ್ತದೆ ಎಂದ ಅವರು ಇಂತಹ ಸಾರ್ವಜನಿಕ ಸೇವಾ ಕಾರ್ಯಕ್ಕೆ ಸಹಾಯ ಹಸ್ತ ಕಲ್ಪಿಸಲು ಸದಾ ಬಯಸುತ್ತೇನೆಂದರು.

ಇದೇ ಸಮಯದಲ್ಲಿ ಕಾರ್ಯಕ್ರಮಕ್ಕೆ ಸಹಕರಿಸಿದ ಸಹಾಯ ಹಸ್ತ ಕಲ್ಪಿಸಿದ ಗಣ್ಯಮಾನ್ಯರಿಗೆ, ಹಾಗೂ ಉಪಸ್ಥಿತ 35 ಜನ ಶ್ರೀಗಳಿಗೆ, ಸನ್ಮಾನಿಸಿ ಗೌರವಿಸಲಾಯಿತು.

ಮುದ್ದೇಬಿಹಾಳದ ಸಾದನಾ ಒಕ್ಕೂಟದ ಪದಾಧಿಕಾರಿಗಳು, ಸದಸ್ಯನಿಯರು, ಶ್ರೀಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಪ್ರಾರ್ಥಿಸಿದರು. ಕಾರ್ಯಕ್ರಮದ ಮೊದಲಿಗೆ ಎಲ್ಲ ಮಠಾಧೀಶರು ಶ್ರೀ ಬಸವೇಶ್ವರ ವೃತ್ತದಿಂದ ಮೆರವಣಿಗೆಯ ಮೂಲಕ ಶ್ರೀ ವಿಠ್ಠಲ ಮಂದಿರಕ್ಕೆ ಆಗಮಿಸಿದರು.

ವೇದಿಕೆಯ ಮೇಲೆ ನಾವದಗಿಯ ರಾಜೇಂದ್ರ ಒಡೆಯರ, ಲೋಟಗೇರಿಯ ಗುರುಮೂರ್ತಿ ದೇವರು, ಮಸಿಬನಾಳ ಶ್ರೀಗಳು, ತುಂಬಗಿ ಮಹಾಂತಲಿಂಗ ಶ್ರೀಗಳು, ಗುಳೇದಗುಡ್ಡ ಶ್ರೀಗಳು, ದೊಡ್ಡ ಸಗರ ಶ್ರೀಗಳು, ಬಾದಾಮಿ ಶಿವಪೂಜ್ಯ ಶ್ರೀಗಳು, ಕೇಂಭಾವಿ ಚನ್ನಬಸವಶ್ರೀಗಳು, ಕಲಕೇರಿ ಸಿದ್ರಾಮೇಶ್ವರ ಶ್ರೀಗಳು, ತಮದಡ್ಡಿ ಶಾಂತ ಮಹಾ ಸ್ವಾಮಿಗಳು, ವಡವಡಗಿ ಬೃಂಗಿಶ್ವರ ಶಿವಾಚಾರ್ಯರು, ಹಿಪ್ಪರಗಿ ವೀರಸಿದ್ದ ಶಿವಾಚಾರ್ಯರು, ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಕರಡಕಲ್ಲ ಶ್ರೀಗಳು, ಗುಳಬಾಳ ಮರಿ ಹುಚ್ಚೇಶ್ವರ ಶ್ರೀಗಳು, ಮುದ್ನೂರ ಗಿರಿದರ ಶಿವಾಚಾರ್ಯರು, ಭಂಟನೂರ ಸರೋಜಮ್ಮತಾಯಿ, ಶರಣೆ ಕಾಶಿಬಾಯಿ ತಾಯಿ ಅವರನ್ನೋಳಗೊಂಡು 35 ಮಠಾಧೀಶರು ಉಪಸ್ಥಿತರಿದ್ದರು.

ಚಬನೂರ ಶ್ರೀ ರಾಮಲಿಂಗ ಮಹಾಸ್ವಾಮಿಗಳು ಸ್ವಾಗತಿಸಿ ಪರಿಚಯಿಸಿದರು. ಆಯ್.ಬಿ.ಹಿರೇಮಠ, ಮಹಾಂತೇಶ ಮುರಾಳ ನಿರೂಪಿಸಿ ವಂದಿಸಿದರು.


ಅಸ್ಕಿ ಪೌಂಡೇಶನ್ ಸೇವಾ ಕಾರ್ಯ ಶ್ಲಾಘನೀಯ

ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರು ವಿಶ್ವ ದಾಸೋಹ ದಿನಾಚರಣೆ ಕಾರ್ಯಕ್ರಮದಲ್ಲಿ ದಾಸೋಹ ವ್ಯವಸ್ಥೆಯನ್ನು ಕೈಗೊಳ್ಳುವದರೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವದು ಶ್ಲಾಘನೀಯವಾಗಿ ಎಂದು ಮಠಾಧೀಶರು ಅಭಿಪ್ರಾಯ ಹಂಚಿಕೊಂಡರು. ಸದಾ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಕೈಜೋಡಿಸುವದರೊಂದಿಗೆ ಬಡ ಬಗ್ಗರಿಗೆ ಅನುಕೂಲ ಕಲ್ಪಿಸುತ್ತಾ ದುಡಿದ ಹಣದಲ್ಲಿ ಸಮಾಜಕ್ಕೆ ಸ್ವಲ್ಪ ಎಂಬ ದೇಯೋದೇಶದೊಂದಿಗೆ ಸಾಗಿರುವ ಈ ಅಸ್ಕಿ ಪೌಂಡೇಶನ್ ಹೆಮ್ಮರವಾಗಿ ಬೆಳೆಯಲಿ ಎಂದು ಎಲ್ಲಶ್ರೀಗಳು ಆಶಿಸಿ ಆಶಿರ್ವದಿಸಿದರು.