ನೆನೆಗುದಿಗೆ ಬಿದ್ದ ಎಸ್ ಎನ್ ಪೇಟೆ ರಸ್ತೆ ಕಾಮಗಾರಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.10:  ನಗರದ  ಸತ್ಯ ನಾರಾಯಣ ಪೇಟೆ ಫಸ್ಟ್ ಕ್ರಾಸ್ ನ ರಸ್ತೆ ಡಾಂಬರೀಕರಣ ಕಾಮಗಾರಿ ಮತ್ತು ಸರ್ಕಲ್ ಅಗಲೀಕರಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ.
ಕಳೆದ ಹಲವು ತಿಂಗಳನಿಂದ ಇಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ ನಡೆದಿದೆ.   ಇನ್ನೂ ಒಂದಿಷ್ಟಿ  ಪೂರ್ಣಗೊಂಡಿಲ್ಲ. ಇದಕ್ಕೆ ಕಾಮಗಾರಿ  ಮಾಡುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳ ನಡುವಿನ ಹೊಂದಾಣಿಕೆ ಕೊರತೆಯಾಗಿದೆ ಎನ್ನಬಹುದು.
ಪಾಲಿಕೆಯವರು ಕುಡಿಯುವ ನೀರಿನ ಪೈಪ್ ಲೈನ್  ಸರಿಯಾಗಿ ಹಾಕಿಲ್ಲ ಎಂಬುದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ದೂರು.
ಪೈಪ್ ಲೈನ್ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಿ ಡಾಂಬರೀಕರಣ ಮಾಡಲು ಸಾರ್ವಜನಿಕರ ಒತ್ತಾಯವಾಗಿದೆ.
ಕಾಮಗಾರಿಗೆ ತೋಡಿದ ಗುಂಡಿಯಿಂದ ವಾಹನಗಳ ಸಂಚಾರಕ್ಕೆ ಸಂಚಾಕಾರ ತರುವಂತೆ ಇದೆ.
ಇನ್ನು ಎಸ್ ಎನ್ ಪೇಟೆ ಸರ್ಕಲ್ ನ್ನು ಬುಡಾದಿಂದ ಅಭಿವೃದ್ಧಿ ಮಾಡುತ್ತೆ ಎಂದು ನಾಲ್ಕು ಕಡೆಗಳಲ್ಲಿ ಕೆದರಿ, ನಡುವೆ ಒಂದು ಹೈ ಮಾಸ್ಟ್ ಲೈಟ್ ಹಾಕಿ ಬಿಡಲಾಗಿದೆ. ಕಾಮಗಾರಿಯನ್ನು ಪೂರ್ಣಗೊಲಕಿಸಿಲ್ಲ. ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು ಸರ್ಕಲ್  ಅದ್ವಾನದ ಸ್ಥಿತಿಗೆ  ಬಂದಿದೆ. ಕೂಡಲೇ ಈ ಕಾಮಗಾರಿ ಮುಗಿಸಲು ಜನತೆ ಒತ್ತಾಯ ಮಾಡಿದ್ದಾರೆ.
 ಪೂರ್ಣಗೊಂಡಿಲ್ಲ 02. ಕೂಲ್ ಕಾರ್ನರ್ ಹತ್ತಿರ ರಾಘವೇಂದ್ರ ಸ್ವಾಮಿ ವೃತ್ತದಲ್ಲಿ ಆಗಲೀ ಕರನ ಕೆಲಸ ಬಹಳಷ್ಟು ದಿನ ಗಳಿಂದ ಪೂರ್ಣಗೊಂಡಿಲ್ಲ ಅಲ್ಲಿ ಟ್ರಾಫಿಕ್ ಯಾವಾಗಲು ಜಾಮ್ ಆಗುತ್ತದೆ ಸಂಬಂಧ ಪಟ್ಟ ಅಧಿಕಾರಿಗಳು ಒಬ್ಬ ಟ್ರಾಫಿಕ್ ಪೊಲೀಸರು ಗೆ ನಿಯಮಕ ಮಾಡುವ ಮೂಲಕ ಪೊಲೀಸ್ ಆಯುಕ್ತರು ಅವರಿಗೆ ಮತ್ತು ಟ್ರಾಫಿಕ್ ಇನ್ಸ್‌ಪೆಕ್ಟರ್ ಅವರಿಗೆ ಪತ್ರವನ್ನು ಬರೆದು ಟ್ರಾಫಿಕ್ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ನಾವು ಸಾಮಾಜಿಕ ಹೋರಾಟಗಾರ ಆರ್ ವೆಂಕಟರೆಡ್ಡಿ ಎಸ್.ಎನ್ ಪೇಟೆ ಫಸ್ಟ್ ಕ್ರಾಸ್ ಬಳ್ಳಾರಿ ಮೊಬೈಲ್ ಸಂಖ್ಯೆ 90359 67678 ಸಂಬಂಧ ಫೋಟೋ ಗಳನ್ನು ನೋಡಿ ಸಾರ್ ವಾಹನ ಸವಾರರು ಮತ್ತು ಅಲ್ಲಿನ ನಿವಾಸಿಗಳು ಗುಂಡಿಗಳು ಮತ್ತು ದೂಳಿನ ಸಮಸ್ಯೆ ದಿಂದ ಹಲವಾರು ರೋಗಗಳು ಹರಡುವ ಸಾಧ್ಯತೆ ಇದೆ.