ನೆನೆಗುದಿಗೆ ಬಿದ್ದಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದ ಸೌಂದರಿಕರಣ ಮತ್ತು ಅಧುನಿಕರಣ ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಪ್ರಿಯಾಂಕ್ ಖರ್ಗೆಗೆ ಲಕ್ಷ್ಮಣ ದಸ್ತಿ ಆಗ್ರಹ

ಕಲಬುರಗಿ,ಅ.30:ಮಹಾನಗರ ಪಾಲಿಕೆ ಮತ್ತು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಸುಮಾರು ನಾಲ್ಕು ವರ್ಷಗಳಿಂದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದ ಅಧುನಿಕರಣ ಮತ್ತು ಸೌಂದರಿಕರಣ ಕಾಮಗಾರಿ ಬಗ್ಗೆ ಅನೇಕ ಬಾರಿ ಕ್ರಿಯಾ ಯೋಜನೆ ರೂಪಿಸಿ ಹಣವು ನಿಗದಿ ಮಾಡಿ ಪಟೇಲ್ ವೃತ್ತದ ಕಾಮಗಾರಿ ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ಅನುಸುತ್ತಾ ಬರಲಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ನೂವಿನಿಂದ ತಿಳಿಸಿದ್ದಾರೆ.
2020.21.22 ಸಾಲಿನಲ್ಲಿ ಪಾಲಿಕೆ ವತಿಯಿಂದ ಪಟೇಲ್ ವೃತ್ತದ ಸೌಂದರಿಕರಣ ಮತ್ತು ಅಧುನಿಕರಣ ಕಾಮಗಾರಿ ವಿಷಯದ ಬಗ್ಗೆ ಭೌತಿಕ ಪರಿಶೀಲನೆ ನಡೆಸಿ ಪಟೇಲ್ ವೃತ್ತದಿಂದ ಲಾಹೋಟಿ ಪೆಟ್ರೋಲ್ ಬಂಕ್ ವರೆಗೆ ಸೌಂದರಿಕರಣದ ಕಾಮಗಾರಿಗೆ ಒಂದು ಕೋಟಿ ಎಂಟು ಲಕ್ಷ ಹಣ ನಿಗದಿ ಮಾಡಿ ಕ್ರಿಯಾ ಯೋಜನೆ ಸಹ ರೂಪಿಸಿ ನಂತರ ಪಟೇಲ್ ವೃತ್ತದ ಕಾಮಗಾರಿ ಕೈ ಬಿಡಲಾಗಿದೆ.ಸಮಿತಿ ಈ ಬಗ್ಗೆ ವಿಚಾರಿಸಿದರೆ ಕಾಮಗಾರಿ ಪ್ರಕ್ರಿಯೆ ಪ್ರಗತಿಯ ಹಂತದಲ್ಲಿದೆ ಎಂದು ಭರವಸೆ ನೀಡಿದರು.ಆದರೆ ಪಾಲಿಕೆಯಿಂದ ಕಾಮಗಾರಿ ನಡೆಯದೆ ನಿರ್ಲಕ್ಷ್ಯ ಮಾಡಲಾಗಿದೆ.
ನಂತರ 2023 ಜನವರಿಯಲ್ಲಿ ಸಮಿತಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪಟೇಲ್ ವೃತ್ತದ ಸೌಂದರಿಕರಣ ಮತ್ತು ಅಧುನಿಕರಣದ ಕಾಮಗಾರಿ ಬಗ್ಗೆ ಪ್ರಸ್ತಾವನೆ ಸಲ್ಲಿಸಿತು, ಪ್ರಾಧಿಕಾರ ಈ ಬಗ್ಗೆ ಪರಿಗಣಿಸಿ ಪಟೇಲ್ ವೃತ್ತದ ಸೌಂದರಿಕರಣ ಮತ್ತು ಅಧುನಿಕರಣದ ಕಾಮಗಾರಿಗೆ 50 ಲಕ್ಷ ಹಣ ನಿಗದಿ ಮಾಡಿ ಮಾರ್ಚ ತಿಂಗಳಲ್ಲಿ ಗುದ್ದಲಿ ಪೂಜೆಯು ಮಾಡಿ ಸದರಿ ಕಾಮಗಾರಿ ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದರು.ಆದರೆ ನಿರ್ಮಿತಿ ಕೇಂದ್ರದಿಂದ ಪಟೇಲ್ ವೃತ್ತದ ಕಾಮಗಾರಿ ಇನ್ನು ಆರಂಬಿಸಿದೆ ವಿನಾಃ ಕಾರಣ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ.ಪ್ರತಿ ವರ್ಷ 17ನೇ ಸೆಪ್ಟೆಂಬರ್ ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಲಬುರಗಿ ಪಟೇಲ್ ವೃತ್ತಕ್ಕೆ ಬಂದಾಗ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ತಾತ್ಕಾಲಿಕ ವ್ಯವಸ್ಥೆಗೆ ಮೆಟ್ಟಿಲುಗಳನ್ನು ನಿರ್ಮಿಸಿ ಇದು ತಾತ್ಕಾಲಿಕ ಬರುವ ವರ್ಷದ ವೇಳೆ ಶಾಶ್ವತ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಕೇವಲ ಭರವಸೆಗಳು ನೀಡುತ್ತಿದ್ದಾರೆ.
ರಾಜ್ಯ ಶಾಯಿ ವ್ಯವಸ್ಥೆಯಿಂದ ಅಖಂಡ ಭಾರತದ ಪ್ರಜಾಶಾಹಿ ವ್ಯವಸ್ಥೆಯಲ್ಲಿ ಹೈದ್ರಾಬಾದ ಸಂಸ್ಥಾನಕ್ಕೆ ಸೇರಿಸಲು ತನ್ನದೆ ಆದ ಮಹಾನ್ ಕೊಡುಗೆ ನೀಡಿ ಇಡೀ ಭಾರತದ ಐದುನೂರಾ ಅರವತೈದು ರಾಜ್ಯಗಳನ್ನು ಭಾರತದಲ್ಲಿ ಸೇರಿಸಿದ ಮಹಾನ್ ದಿಟ್ಟ ರಾಷ್ಟ್ರ ನಿರ್ಮಾಪಕನ ವೃತ್ತಕ್ಕೆ ನಿರ್ಲಕ್ಷ್ಯ ಮಾಡುತ್ತಿರುವುದು ಖೇದಕರದ ಸಂಗತಿಯಾಗಿದೆ.
ಈ ಮಹತ್ವದ ವಿಷಯದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆರವರು ಅತಿ ಗಂಭೀರವಾಗಿ ಪರಿಗಣಿಸಿ ಕಾಲಮಿತಿಯಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದ ಸೌಂದರಿಕರಣ ಮತ್ತು ಅಧುನಿಕರಣದ ಕಾಮಗಾರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸಮಿತಿ ಆಗ್ರಹಿಸುತ್ತದೆ.