ನೆನಪು ಮರುಕಳಿಸಿದಾಗ ಬಿಡುಗಡೆಗೆ ಸನಿಹಕ್ಕೆ

ಕಾದಂಬರಿ ಆಧಾರಿತ “ನೆನಪು ಮರುಕಳಿಸಿದಾಗ” ಚಿತ್ರ ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ.

ಬೆಂಗಳೂರು, ಮಂಡ್ಯ, ಕೆ.ಎಂ.ದೊಡ್ಡಿ, ಬಿಡದಿ, ಭೈರಮಂಗಲ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಶಿರಾ ಕರಾವರಹಳ್ಳಿ ಡಿ.ಎಸ್. ಕೃಷ್ಣಮೂರ್ತಿ ನಿರ್ಮಾಣದ ಚಿತ್ರಕ್ಕೆ ದೇವದಾಸ್  ಆಕ್ಷನ್‍ಕಟ್ ಹೇಳಿದ್ದಾರೆ.

ಚಿತ್ರದ ಲಿರಿಕಲ್ ಹಾಡು ಬಿಡುಗಡೆಗೆ ಹಿರಿಯ ನಿರ್ದೇಶಕರುಗಳಾದ ಜೋಸೈಮನ್, ಬಿ.ರಾಮಮೂರ್ತಿ ಮತ್ತು ಗುರುಪ್ರಸಾದ್‍ಪತ್ತಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.

ಈ ವೇಳೆ ಮಾತಿಗಿಳಿದ ಡಿ.ಎಸ್ ಕೃಷ್ಣಮೂರ್ತಿ ಅವರು, ತ್ರಿಕೋನ ಪ್ರೇಮಕಥೆಯ ಚಿತ್ರ. ನಾಯಕ ಹಳ್ಳಿಯಲ್ಲಿ ಇದ್ದು, ಮಾವನ ಮಗಳು ಇರುತ್ತಾಳೆ. ನಂತರ ಉದ್ಯೋಗ ಹರಿಸಿ ಬೆಂಗಳೂರಿಗೆ ಬಂದಾಗ ಹುಡುಗಿಯೊಬ್ಬಳ ಒಳ್ಳೆ ಗುಣ ಕಂಡು ಪ್ರೀತಿ ಮಾಡುತ್ತಾಳೆ. ಕೊನೆಗೆ ಇವನು ಯಾರಿಗೆ ಸಿಗುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ ಎನ್ನುವ ಮಾಹಿತಿ ಹಂಚಿಕೊಂಡರು.

ನಾಯಕನಾಗಿ ಬುಲೆಟ್‍ವಿನೋದ್, ನಾಯಕಿ ಸೌಂದರ್ಯಗೌಡ, ಸೋನಿಶೆಟ್ಟಿ, ಅಬಿ ಸನ್ನಿ ತುಮಕೂರು, ಶೋಭರಾಜ್, ಕಿಲ್ಲರ್‍ವೆಂಕಟೇಶ್, ಮೀಸೆ ಆಂಜನಪ್ಪ, ಚಿಕ್ಕ ಹೆಜ್ಜಾಜಿ ಮಹದೇವ್, ಮೈಸೂರು ಮಂಜುಳ, ನರಸಿಂಹಯ್ಯ, ಅಶೋಕ್.ಎಂ.ಕಾಳೆ ಮುಂತಾದವರು ನಟಿಸಿದ್ದಾರೆ. ಅಲೆನ್ ಕ್ಲಾರೆನ್ಸ್ ಕ್ರಾಸ್ತ ಸಂಗೀತ,ರಮೇಶ್‍ಕೊಯಿರಾ ಛಾಯಾಗ್ರಹಣವಿದೆ.