ನೆನಪು ಮರುಕಳಿಸಿದಾಗ ಏಳು ಸ್ವರಗಳ ಸಂಗೀತ

ಶಿರಾ ಕರಾವರಹಳ್ಳಿ ಡಿ.ಎಸ್. ಕೃಷ್ಣಮೂರ್ತಿ ಚಿತ್ರ ನಿರ್ಮಾಣ ಮಾಡಿ ಅವರೇ ಬರೆದಿರುವ ‘ನೆನಪು ಮರುಕಳಿಸಿದಾಗ’ ಕಾದಂಬರಿಯ ಆಧಾರಿತ ,ಚಿತ್ರ ನಿರ್ಮಿಸಿದ್ದಾರೆ. ತ್ರಿಕೋನ ಪ್ರೇಮ ಕಥೆ, ಕಾಲೇಜ್ ಕ್ಯಾಂಪಸ್ಸಿನಲ್ಲಿ ನಡೆಯುವ ಕಥೆಗೆ ದೇವದಾಸ್ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರವನ್ನು ಮಂಡ್ಯ ಸುತ್ತಮುತ್ತ ಏಳು ಸ್ವರಗಳ ಸಂಗೀತ ಏಳು ಹೆಜ್ಜೆಗಳ ಸಮ್ಮಿಲನ ಅಲ್ಲದೇ, ಮುಂಗಾರು ಭೂಮಿ ಮುದ್ದು ಮಾಡಿದೆ, ಎಲ್ಲೆಲ್ಲೂ ಈಗ …..” ಈ ಗೀತೆಗಳ ಚಿತ್ರೀಕರಣ ನಡೆಯಿತು

 ಚಿತ್ರದಲ್ಲಿ ಬುಲೆಟ್ ವಿನೋದ್, ಸೋನಿ ಶೆಟ್ಟಿ. ಸೌಂದರ್ಯ, ಶೋಭರಾಜ್, ಕಿಲ್ಲರ್ ವೆಂಕಟೇಶ್, ಶಂಕನಾದ ಮೀಸ್ ಆಂಜನಪ್ಪ,  ಚಿಕ್ಕ ಹೆಜ್ಜಾಜಿ ಮಹದೇವ್, ಮೈಸೂರು ಮಂಜುಳ, ನರಸಿಂಹಯ್ಯ, ಚಿತ್ರದುರ್ಗದ ಜಂಬುನಾಥ, ಗುಲ್ಪರ್ಗದ ಅಶೋಕ್ ಕಾಳೆ, ಮುಂತಾದವರಿದ್ದಾರೆ

ರಮೇಶ್ ಕೊಯಿರಾ ಛಾಯಾಗ್ರಹಣವಿದೆ. ನವನ್.ಆರ್, ತ್ಯಾಗರಾಜ್, ಲೋಕೇಶ್, ಕಾಂತರಾಜು, ಶ್ರೀನಿವಾಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.