ನೆನಪಿನ ಪಡಸಾಲೆಗೆ ಗುಲ್ಬರ್ಗಾ ವಿವಿ ಪ್ರಶಸ್ತಿ

ಹೊಸಪೇಟೆ ನ 03 : ಕನ್ನಡ ರಾಜ್ಯೋತ್ಸವ ಅಂಗವಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯ ನೀಡುವ ಕಲ್ಯಾಣ ಕರ್ನಾಟಕ ಪುಸ್ತಕ ಪ್ರಶಸ್ತಿಗೆ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿ ವಿಜಯಭಾಸ್ಕರ ರೆಡ್ಡಿ ಅವರ ಪುಸ್ತಕ ಆಯ್ಕೆಯಾಗಿದೆ‌.
2019ನೇ ಸಾಲಿನಲ್ಲಿ ಪ್ರಕಟವಾಗಿರುವ ಕೃತಿಗಳು ಹಾಗೂ ಪ್ರಕಾಶಕರಿಗೆ ಗುಲ್ಬರ್ಗಾ ವಿವಿ ಕೊಡಮಾಡುವ ಪ್ರಶಸ್ತಿಗೆ ವಿಜಯಭಾಸ್ಕರ ರೆಡ್ಡಿ ರಚಿಸಿರುವ ಮೊದಲ ಕವನ ಸಂಕಲನ ರಾಷ್ಟ್ರಕೂಟ ಪುಸ್ತಕ ಮನೆ ಪ್ರಕಾಶನದ ನೆನಪಿನ ಪಡಸಾಲೆ ಆಯ್ಕೆಯಾಗಿದ್ದು, , ಇದೇ ತಿಂಗಳ ಕೊನೆವಾರದಲ್ಲಿ ವಿವಿ ಕಾರ್ಯಸೌಧದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ.
ಮೂಲತಃ ಕಲಬುರಗಿಯ ಸೇಡಂ ತಾಲೂಕಿನ ವಿಜಯಭಾಸ್ಕರ ರೆಡ್ಡಿ ತಾಲೂಕಿನ ಕನ್ನಡ ವಿಶ್ವದ್ಯಾಲಯ ಪತ್ರಿಕೋದ್ಯಮ ವಿಭಾಗದಲ್ಲಿ ಅಂತಿಮ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ.