ನೆನಪಿನಲ್ಲಿ ನಾಟಿದ ನಾಟು ನಾಟು

ಮೋದಿ ಬಣ್ಣನೆ
ನವದೆಹಲಿ,ಮಾ.೧೩- ಆಸ್ಕರ್ ಪ್ರಶಸ್ತಿ ವಿಜೇತ ಆರ್ ಆರ್ ಆರ್ ಚಿತ್ರದ “ನಾಟು ನಾಟು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಣಗಾನ ಮಾಡಿದ್ದಾರೆ.ಈ ಗೆಲುವು ’ಅಸಾಧಾರಣ’. ’ನಾಟು ನಾಟು’ ಹಾಡಿನ ಜನಪ್ರಿಯತೆ ಜಾಗತಿಕವಾಗಿದೆ ಮತ್ತು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡು ಎಂದು ಹೇಳಿದ್ದಾರೆ.೯೫ನೇ ಅಕಾಡೆಮಿ ಪ್ರಶಸ್ತಿ ವಿಭಾಗದಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿವಗೆದ್ದ ’ನಾಟು ನಾಟು’ ಹಾಡಿಗೆ ಅಭಿನಂದನೆ ಸಲ್ಲಿಸಿ ಗುಣಗಾನ ಮಾಡಿದ್ದಾರೆ.ಜಗತ್ತಿನಾದ್ಯಂತ ವೈರಲ್ ಆಗಿರುವ ಹಾಡಿಗೆ ಸಂಗೀತ ಸಂಯೋಜಕ ಎಂಎಂ ಕೀರವಾಣಿ, ಗೀತರಚನೆಕಾರ ಚಂದ್ರಬೋಸ್ ಮತ್ತು ಚಿತ್ರ ಆರ್‌ಆರ್‌ಆರ್‌ನ ಇಡೀ ತಂಡವನ್ನು ಪ್ರಧಾನಿ ಅಭಿನಂಧಿಸಿದ್ದಾರೆ.ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ನಿರ್ಮಾಣದ ಚಿತ್ರದ ಹಾಡು ಇದಾಗಿದೆ ಎಂದಿದ್ದಾರೆ.ಮತ್ತೊಂದು ಟ್ವೀಟ್‌ನಲ್ಲಿ, ಪ್ರಧಾನಮಂತ್ರಿ ಅವರು ಆಸ್ಕರ್‌ನಲ್ಲಿ ಭಾರತದ ಎರಡನೇ ವಿಜಯಕ್ಕಾಗಿ ಸಾಕ್ಷ್ಯಚಿತ್ರ ನಿರ್ಮಾಪಕ ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ಗುನೀತ್ ಮೊಂಗಾ ಅವರನ್ನು ಅಭಿನಂದಿಸಿದ್ದಾರೆ.ಸಾಕ್ಷ್ಯ ಚಿತ್ರ ಸುಸ್ಥಿರ ಅಭಿವೃದ್ಧಿ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಪ್ರಾಮುಖ್ಯತೆ ಅದ್ಭುತವಾಗಿ ಎತ್ತಿ ತೋರಿಸುತ್ತದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಗಣ್ಯರ ಅಭಿನಂಧನೆ:

ಆರ್ ಆರ್ ಅರ್ ಚಿತ್ರದ ನಾಟು ನಾಟು ಹಾಡು ಮೂಲಗೀತೆ ವಿಭಾಗದಲ್ಲಿ ಪ್ರಶಸ್ತಿ ಪಡೆಯುತ್ತಿದ್ದಂತೆ ದೇಶ ವಿದೇಶಗಳಿಂದ ಅಭಿನಂಧನೆ ಮಹಾಪೂರ ಹರಿದು ಬಂದಿದೆ.ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಆರ್‌ಆರ್ ತಂಡವನ್ನು ದೊಡ್ಡ ಗೆಲುವಿಗೆ ಅಭಿನಂದಿಸಿದ್ದಾರೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಸೇರಿದಂತೆ ದೇಶ ವಿದೇಶದಲ್ಲಿ ಅನೇಜ ಗಣ್ಯರು ಹಾಡು ಪ್ರಶಸ್ತಿ ಪಡೆದಿರುವುದಕ್ಕೆ ಅಭಿನಂಧನೆ ಸಲ್ಲಿಸಿದ್ದಾರೆ.ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಾ ಭೈರವ ಹಾಡಿರುವ ಈ ಹಾಡು ಮಾರ್ಚ್ ೨೦೨೨ ರಲ್ಲಿ ಬಿಡುಗಡೆಯಾದಾಗಲೇ ಜನಪ್ರಿಯವಾಯಿತು. ಈ ವರ್ಷದ ಆರಂಭದಲ್ಲಿ, ಜನವರಿಯಲ್ಲಿ, ’ಗೋಲ್ಡನ್ ಗ್ಲೋಬ್ ೨೦೨೩ ರಲ್ಲಿ ನಾಟು ಸಾಂಗ್. ಇದು ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ಮತ್ತು ಹಾಲಿವುಡ್‌ನಲ್ಲಿ ಅತ್ಯುತ್ತಮ ಹಾಡು ಪ್ರಶಸ್ತಿ ಗೆದ್ದಿತ್ತು