ನೆತ್ತಿ ಬುತ್ತಿಯಿಂದ ಜಗದ್ಗುರುಗಳ ಅದ್ದೂರಿ ಸ್ವಾಗತಕ್ಕೆ ಸಿದ್ದತೆ:ಗುಂಡಕನಾಳಶ್ರೀ

ತಾಳಿಕೋಟೆ:ನ.9: ಈ ದೇಶದ ಧರ್ಮ, ಸಂಸ್ಕøತಿ, ಸಂಸ್ಕಾರ ಈ ಅತ್ಯಂತ 3 ಅಂಶಗಳಿಂದ ಪೂಜ್ಯ ಶ್ರೀಶೈಲ ಜಗದ್ಗುರುಗಳು ಕರೆ ಕೊಟ್ಟಂತೆ ಸಾಕ್ಷಾತ್ಕಾರಗೊಳಿಸಲು ತಾಳಿಕೋಟೆ ನಗರದ ಎಲ್ಲ ಜನ ಸಾಮಾನ್ಯರು ಪೂರ್ವಸಿದ್ದತೆಯನ್ನು ಮಾಡಿಕೊಂಡಿದ್ದಾರೆಂದು ಪಾದಯಾತ್ರೆ ಸಮಿತಿ ನೇತೃತ್ವ ವಹಿಸಿದ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಸೋಮವಾರರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಜಗದ್ಗುರುಗಳ ಪಾದಯಾತ್ರೆಯಲ್ಲಿ ಪ್ರಮುಖವಾಗಿರುವಂತಹದ್ದು ಹಸಿದ ಹೊಟ್ಟೆಗೊಂದು ರೊಟ್ಟಿ ಸಮಾಜಕ್ಕೆ ಎಂಬುದು ಇವತ್ತಿನಿಂದಲೇ ಪ್ರಾರಂಭವಾಗಬೇಕಿದೆ ಎಂಬ ಉದ್ದೇಶವಾಗಿದೆ ಮನೆಯಲ್ಲಿ ಮಾಡುವ ಮೊದಲನೇಯ ರೊಟ್ಟಿಯನ್ನು ತಾಳಿಕೋಟೆ ನಗರದಲ್ಲಿರುವ ಮಠಗಳಿಗೆ ನೀಡುವ ಸಂಕಲ್ಪದೊಂದಿಗೆ ಸಂಕಲ್ಪ ನೆತ್ತಿ ಬುತ್ತಿಯನ್ನು ತಲೆಯ ಮೇಲೆ ಹೊತ್ತು ಸಾವಿರಾರು ಸಂಖ್ಯೆಯಲ್ಲಿ ಸೇರುವದರೊಂದಿಗೆ ಜಗದ್ಗುರುಗಳನ್ನು ಸ್ವಾಗತಿಸುವಂತಹ ಕಾರ್ಯವಾಗಲಿದೆ ಧರ್ಮ, ವಿದ್ಯೆ, ವಿನಯ, ಪ್ರಚಾರಕ್ಕಾಗಿ, ದುಡಿಮೆಯ ಒಂದು ನಾಣ್ಯವನ್ನು ಕನಿಷ್ಠ ಒಂದು ನಾಣ್ಯವನ್ನು ಸಮಾಜಕ್ಕೆ ನೀಡುವ ಸಂಕಲ್ಪದೊಂದಿಗೆ ತಾಳಿಕೋಟೆ ನಗರದ ಪ್ರತಿಯೊಬ್ಬರು ಪ್ರತಿಯೊಂದು ಕುಟುಂಭದಿಂದ ನಾಣ್ಯವನ್ನು ಸಂಗ್ರಹಿಸಿ ಆ ನಾಣ್ಯದಿಂದ ಜಗದ್ಗುರುಗಳ ತುಲಾಭಾರವನ್ನು ನಡೆಸುವ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ ಶ್ರೀಗಳು ಮತ್ತೊಂದು ತಾಳಿಕೋಟೆ ನಗರದ ರೈತರು ಬೆಳೆಯುವ ಡೋಣಿ ದಂಡೆಯ ಪ್ರಸಿದ್ದ ದಾನ್ಯಗಳಾದ ಜೋಳ, ಗೋದಿ, ತೋಗರಿ, ಕಡ್ಲಿ, ಮತ್ತು ಸಕ್ಕರೆ ಪ್ರತಿಯೊಬ್ಬ ರೈತ ಮತ್ತು ವ್ಯಾಪಾರಸ್ಥರಿಂದ ಹಾಗೂ ಮನೆ ಮನೆಯಿಂದ ಹಿಡಿ ದಾನ್ಯವನ್ನು ಸಂಗ್ರಹಿಸಿ ಅದನ್ನು ಪೂಜ್ಯರ ತುಲಾಭಾರದೊಂದಿಗೆ ವೀರಶೈವ ಲಿಂಗಾಯತ ಧರ್ಮದ ಸಂಸ್ಕøತಿ, ಸಂಸ್ಕಾರವನ್ನು ಪುನರ್ ಜೀವನಮಾಡಿ ಪೂನಃ ಸ್ಥಾಪನೆ ಗೊಳಿಸಲು ಸಂಕಲ್ಪ ಮಾಡುವ ಉದ್ದೇಶ ಹೊಂದಿದೆ ಎಂದರು.
ಜನರ ದುಡಿಮೆಯ, ಬೆವರಿನ ಒಂದು ರೊಟ್ಟಿ, ಒಂದು ನಾಣ್ಯ, ಒಂದು ಹಿಡಿ ದಾನ್ಯ ನನ್ನ ಧರ್ಮಕ್ಕಾಗಿ, ನನ್ನ ಸಂಸ್ಕøತಿಗಾಗಿ ನನ್ನ ಸಂಸ್ಕಾರ ಪುನರ್‍ಜೀವನಗೊಳಿಸುವದಕ್ಕಾಗಿ ಸಂಕಲ್ಪದೊಂದಿಗೆ ದಾಸೋಹ ಪರಿಕಲ್ಪನೆಯೊಂದಿಗೆ ಮರಳಿ ಹಿಂದಿನ ಸಂಸ್ಕಾರಬರಲಿ ಎಂಬ ಉದ್ದೇಶ ಇದರಲ್ಲಿ ಅಡಗಿದೆ ಎಂದು ಗುಂಡಕನಾಳಶ್ರೀಗಳು ಹೇಳಿದರು.
ಈ ಸಮಯದಲ್ಲಿ ಮುಖಂಡರುಗಳಾದ ಬಸನಗೌಡ ವಣಕ್ಯಾಳ, ವಾಸುದೇವ ಹೆಬಸೂರ, ಮುರುಗೆಪ್ಪ ಸರಶೆಟ್ಟಿ, ಸಂಗಮೇಶ ಇಂಗಳಗಿ, ಜೈಸಿಂಗ್ ಮೂಲಿಮನಿ, ಮುದಕಪ್ಪ ಬಡಿಗೇರ, ಪ್ರಭು ಮುರಡಿಮಠ, ಚನ್ನಯ್ಯ ಹಿರೇಮಠ, ಮೊದಲಾದವರು ಇದ್ದರು.