ನೆಟ್ ವರ್ಕ್ ವೇಗ ಹೆಚ್ಚಿಸಲು ಮನವಿ

ಹಿರಿಯೂರು  .ಜೂನ್-2  ನಗರ   ಹಾಗೂ ಗ್ರಾಮೀಣ ಎಲ್ಲಾ ಕಂಪನಿಗಳ, ಇಂಟರ್ನೆಟ್ ಸ್ಲೋ ಆಗಿದ್ದು  ಆನ್ಲೈನ್ ಪಾಠ ಕೇಳಲು ವಿದ್ಯಾರ್ಥಿಗಳಿಗೆ ಅಡಚಣೆ ಉಂಟಾಗುತ್ತಿದೆ ನಗರ ಪ್ರದೇಶದಲ್ಲಿ ಈ ರೀತಿ ಆದರೆ ಇನ್ನೂ ನೆಟ್ ವರ್ಕ್ ಸಿಗದ ಹಳ್ಳಿ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಮರೀಚಿಕೆಯಾಗಿದೆ  ಎಲ್ ಕೆ ಜಿ ಯಿಂದ ಉನ್ನತ ಶಿಕ್ಷಣ,ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಇರುತ್ತವೆ ಜೊತೆಗೆ ವರ್ಕ್ ಫ್ರಂ ಹೋಮ್ ಸರ್ಕಾರಿ ನೌಕರರಿಗೆ,  ಖಾಸಗಿ ಸಂಸ್ಥೆಗಳು,ಸಂಘ ಸಂಸ್ಥೆಗಳ  ಝೂಮ್ ಮೀಟಿಂಗ್, ಲಾಕ್ ಡೌನ್ ನಲ್ಲಿ ಮನೆಯಲ್ಲಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುವ ನಾಗರಿಕರೂ ಸೇರಿದಂತೆ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಜಾಸ್ತಿ ಆಗಿದ್ದು ಇಂಟರ್ನೆಟ್ ಸ್ಪೀಡ್ ಕಡಿಮೆ ಆಗಲು ಕಾರಣ ಆಗಿರುತ್ತದೆ,        ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಗಮನ ಹರಿಸಿ ಮೊಬೈಲ್ ಇಂಟರ್ನೆಟ್ ಕಂಪನಿಗಳಿಗೆ ಹೆಚ್ಚಿನ ತರಂಗಾಂತರಗಳನ್ನು ಹಂಚಿಕೆ ಮಾಡುವ ಮೂಲಕ ಇಂಟರ್ನೆಟ್ ಸ್ಪೀಡ್ ಜಾಸ್ತಿ ಮಾಡಬೇಕು ಈಗಿರುವ ಪರಿಸ್ಥಿತಿಯಲ್ಲಿ ಆನ್ಲೈನ್ ಪಾಠ ಮಾಡಿದರೆ ಶಿಕ್ಷಕರು ಪಾಠ ಮಾತ್ರ ಮಾಡುತ್ತಾರೆ, ಅದು ವಿದ್ಯಾರ್ಥಿಗಳಿಗೆ ತಲುಪಲು ಸಾಧ್ಯವಿಲ್ಲ ಜೂನ್ 15 ರಿಂದ ಶಾಲೆಗಳು ಪ್ರಾರಂಭ ಆಂತ ರಾಜ್ಯ ಸರ್ಕಾರ ಹೇಳುತ್ತಿದ್ದು ಆನ್ಲೈನ್ ಪಾಠ ಕೇಳಲು ವಿದ್ಯಾರ್ಥಿಗಳಿಗೆ ಇಂಟರ್ ನೆಟ್ ಸ್ಪೀಡ್ ಜಾಸ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಾದ ಕಸವನಹಳ್ಳಿರಮೇಶ್ ಕುಮಾರ್ಮನವಿ ಮಾಡಿದ್ಧಾರೆ.