ನೆಟ್ ಬಾಲ್ ಪಂದ್ಯಾವಳಿ

(ಸಂಜೆವಾಣಿ ವಾರ್ತೆ)
ಬಾದಾಮಿ,ಜ10: 2023-24 ನೇ ಸಾಲಿನ ವಿಶ್ವವಿದ್ಯಾಲಯದ ತಂಡದ ಆಯ್ಕೆ ಸಂಬಂಧ ಏಕವಲಯ ಅಂತರ್ ಕಾಲೇಜುಗಳ ಪುರುಷರ ಹಾಗೂ ಮಹಿಳಾ ನೆಟ್ ಬಾಲ್ ಪಂದ್ಯಾವಳಿಯನ್ನು ಜ.11 ಮತ್ತು 12 ರಂದು ಎರಡು ದಿನಗಳ ಕಾಲ ವೀರಪುಲಿಕೇಶಿ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಎಸ್.ಬಿ.ಎಂ.ಪದವಿ ಕಾಲೇಜಿನ ಪ್ರಾಚಾರ್ಯ ರವೀಂದ್ರ ಮೂಲಿಮನಿ ತಿಳಿಸಿದರು.

  ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ,  ಎಸ್.ಬಿ.ಎಂ.ಪದವಿ ಮಹಾವಿದ್ಯಾಲಯ ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಬೆಳಿಗ್ಗೆ 9.30 ಗಂಟೆಗೆ ಬಸವಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 

ಸಂಸ್ಥೆಯ ಉಪಚೇರಮನ್ ಸುನೀಲ ಕಾರುಡಗಿಮಠ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮವನ್ನು ರಾಜ್ಯ ಪಿಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಮಹಾಂತೇಶ ಮಮದಾಪೂರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಬಿ.ಚಳಗೇರಿ, ಅತಿಥಿಗಳಾಗಿ ಜಗದೀಶ ಗಸ್ತಿ, ಕೆ.ಎಂ.ಶಿರಹಟ್ಟಿ, ಎಸ್.ಡಿ.ಫತ್ತೇಪೂರ, ಪಿ.ಬಿ.ಕಾಚೆಟ್ಟಿ, ಬಿ.ಎಸ್.ಪಟ್ಟಣಶೆಟ್ಟಿ, ವಿ.ಕೆ.ಬಾಗಲೆ, ಎನ್.ಎಸ್.ಕಾಚೆಟ್ಟಿ, ಎಸ್.ಎಚ್.ಮೇಟಿ, ಗಿರೀಶ ಶೆಟ್ಟರ ಭಾಗವಹಿಸಲಿದ್ದಾರೆ.

ಏಕವಲಯ ಅಂತರ್ ಕಾಲೇಜುಗಳ ಪುರುಷರ ಹಾಗೂ ಮಹಿಳಾ ನೆಟ್ ಬಾಲ್ ಪಂದ್ಯಾವಳಿಯಲ್ಲಿ 15 ತಂಡಗಳು ಭಾಗವಹಿಸಲಿವೆ. ಇವರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಯೋಗಾಶನ ಮತ್ತು ನೆಟ್ ಬಾಲ್ ನಲ್ಲಿ ಯುನಿವರ್ಶಿಟಿ ಬ್ಲೂ ಆಗಿ ಆಯ್ಕೆಯಾಗಿ ಹೊರರಾಜ್ಯದಲ್ಲಿ ಭಾಗವಹಿಸುತ್ತಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಪ್ರಾಧ್ಯಾಪಕ ಎಸ್.ಎನ್.ಬೇನಾಳ, ಎನ್.ಬಿ.ಸೋಮನಕಟ್ಟಿ, ಎ.ಬಿ.ಜನಾಲಿ, ಶಿವುಕುಮಾರ ಅಂಗಡಿ, ಪಿ.ಎಸ್.ಚನಗೊಂಡ ಸೇರಿದಂತೆ ಸಹಪ್ರಾಧ್ಯಾಪಕರು ಉಪಸ್ಥಿತರಿದ್ದರು.