ನೆಟ್‍ಬಾಲ್ ಪಂದ್ಯಾವಳಿ ಫಲಿತಾಂಶ

(ಸಂಜೆವಾಣಿ ವಾರ್ತೆ)
ಬಾದಾಮಿ,ಜ18: ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ನಗರದ ವೀರಪುಲಕೇಶಿ ಸಂಸ್ಥೆಯ ಎಸ್.ಬಿ.ಎಂ.ಪದವಿ ಕಾಲೇಜಿನ ಸಹಯೋಗದಲ್ಲಿ ಶ್ರೀ ವೀರಪುಲಿಕೇಶಿ ಸಂಸ್ಥೆಯ ಆವರಣದಲ್ಲಿ ನಡೆದ 2023-24 ನೇ ಸಾಲಿನ ವಿಶ್ವವಿದ್ಯಾಲಯದ ತಂಡದ ಆಯ್ಕೆ ಏಕವಲಯ ಅಂತರ್ ಕಾಲೇಜುಗಳ ಪುರುಷರ ಹಾಗೂ ಮಹಿಳಾ ನೆಟ್ ಬಾಲ್ ಪಂದ್ಯಾವಳಿಯ ಫಲಿತಾಂಶ ಪ್ರಕಟಗೊಂಡಿದೆ.
ಪುರುಷರ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ್ ಕಾಲೇಜ್, ಬೆಳಗಾವಿ ಪ್ರಥಮ, ಹಾಗೂ ನಿಪ್ಪಾಣಿಯ ಜಿ.ಐ. ಬಾಗೇವಾಡಿ ಕಾಲೇಜ್ ದ್ವಿತೀಯ, ಎಸ್.ಕೆ. ಕಾಲೇಜ್ ತಾಳಿಕೋಟಿ ತೃತೀಯ ಸ್ಥಾನ ಪಡೆದುಕೊಂಡವು.
ಮಹಿಳಾ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ್ ಕಾಲೇಜ್ ಬೆಳಗಾವಿ ಪ್ರಥಮ, ವೀರ ಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಶ್ರೀ ಎಸ್.ಬಿ.ಮಮದಾಪುರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಬಾದಾಮಿ ದ್ವಿತೀಯ, ಹಾಗೂ ಎಸ್.ಕೆ. ಕಾಲೇಜ್, ತಾಳಿಕೋಟಿ ತೃತೀತ ಸ್ಥಾನ ಪಡೆದುಕೊಂಡರು.
ಒಟ್ಟು ಕ್ರೀಡೆಯಲ್ಲಿ 12 ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದು, 9 ಮಹಿಳೆಯರ ತಂಡಗಳು 13 ಪುರುಷ ತಂಡಗಳು ಭಾಗವಹಿಸಿದ್ದರು. ಅದರಲ್ಲಿ 70ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಯುನಿವರ್ಸಿಟಿ ಬ್ಲೂ ಆಯ್ಕೆಯಲ್ಲಿ ಭಾಗಿಯಾಗಿದ್ದರು.
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕ ಗಸ್ತಿ, ಕಾಲೇಜಿನ ಪ್ರಾಚಾರ್ಯ ರವೀಂದ್ರ ಮೂಲಿಮನಿ ಸಂಸ್ಥೆಯ ನಿರ್ದೇಶಕರಾದ ಎಸ್.ಡಿ.ಫತ್ತೇಪೂರ, ಪ್ರಶಾಂತ ಪಟ್ಟಣದ, ಹಾಗೂ ನಾಗರಾಜ ಕಾಚೆಟ್ಟಿ, ವಿ.ಕೆ.ಬಾಗಲೆ, ದೈಹಿಕ ನಿರ್ದೇಶಕ ಬಸವರಾಜ ಬಳಗೇರಪಾಟೀಲ, ಉಪನ್ಯಾಸಕಿ ಎ.ಬಿ. ಜನಾಲಿ ಉಪಸ್ಥಿತರಿದ್ದರು.
ಶಿವುಕುಮಾರ ಅಂಗಡಿ ನಿರೂಪಿಸಿದರು. ನಿಕಿಲ್ ಕುರಿ ವಂದಿಸಿದರು ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಸಹಪ್ರಾಧ್ಯಾಪಕರು ಭಾಗವಿಸಿದ್ದರು.