ನೆಟ್ಟ ಸಸಿಗಳನ್ನು ಮಕ್ಕಳಂತೆ ಪೋಷಣೆ ಮಾಡಿ

ಚಿಂಚೋಳಿ,ಮಾ 15 : ತಾಲೂಕಿನ ಸುಲೇಪೇಟ ಗ್ರಾಮದ ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಸೋಲಾರಪ್ಯಾಕ್ ಹಾಗೂ ಬಾಲವಿಕಾಸ ಸಂಸ್ಥೆ ಯಿಂದ ಸಂಸ್ಥೆಯ ಅಧಿಕಾರಿ ಲಿಂಗಯ್ಯ ಅವರು ವಿದ್ಯಾರ್ಥಿಗಳಿಗೆ ಸಸಿ ವಿತರಣೆ ಮಾಡಿದರು. ಸಸಿಗಳನ್ನು ನೆಡುವುದು ಮುಖ್ಯವಲ್ಲ, ನೆಟ್ಟ ಸಸಿಗಳನ್ನು ಮಕ್ಕಳಂತೆ ರಕ್ಷಿಸಿ ಪೋಷಣೆ ಮಾಡಿ ಅವುಗಳನ್ನು ಹೆಮ್ಮರವಾಗಿಸುವುದು ಮುಖ್ಯ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಗಿಡಮರಗಳಿಂದ ನಮ್ಮ ಪರಿಸರ ತಂಪಾಗಿರುತ್ತದೆ.ಮರಗಳು ಬಿಡುವ ಆಮ್ಲಜನಕದಿಂದ ಜನಸಾಮಾನ್ಯರಿಗೆ ಒಳ್ಳೆಯ ಗಾಳಿ ಸಿಗುತ್ತದೆ.ಈಗಾಗಲೇ ಆಕ್ಸಿಜನ್ ಗೋಸ್ಕರ ಜನರು ಪರದಾಡುವ ಪರಿಸ್ಥಿತಿ ಬಂದಿದೆ.ಗಿಡಮರಗಳು ಬೆಳೆದರೆ ನಮಗೆ ನಮ್ಮ ಪರಿಸರಕ್ಕೆ ಒಳ್ಳೆಯದು ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಅಲ್ಲಮಪ್ರಭು ಪಾಟೀಲ, ಜಗನ್ನಾಥ ಕೆ, ಶರಣಬಸಪ್ಪ ಗಂಗಾಣಕರ್ ,ಬಸವರಾಜ ಭಾಗಾ, ಸುವರ್ಣ, ಶಿವಾನಂದ ಹಿರೇಮಠ, ಮಹ್ಮದ ಸಿರಾಜ ಪಟೇಲ್ ಸೇರಿ ಶಿವಶರಣಪ್ಪ, ದಯಾನಂದ
ಹಸೀನ ಬೇಗಂ, ಸುವರ್ಣ ಗಂಗಾಧರ, ಸತೀಶ್, ಅಣ್ಣಾರಾವ ಇತರರು ಇದ್ದರು