ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.: ವಿಶ್ವ ಪರಿಸರ ದಿನಾಚರಣೆ

ಪುತ್ತೂರು, ಜೂ.೭- ತಾಲೂಕು ಪಂಚಾಯತ್ ಪುತ್ತೂರು, ಗ್ರಾಮ ಪಂಚಾಯತ್ ನೆಟ್ಟಣಿಗೆ ಮುಡ್ನೂರು ಹಾಗೂ ಸಾಮಾಜಿಕ ವಲಯ ಅರಣ್ಯ ಇಲಾಖೆ ಪುತ್ತೂರು ಇವರ ಸಂಯುಕ್ತ ಸಹಯೋಗದಲ್ಲಿ ‘ವಿಶ್ವ ಪರಿಸರ ದಿನ’ದ ಅಂಗವಾಗಿ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುರುಳಿಮೂಲೆ ಗ್ರಾಮ ಪಂಚಾಯತ್ ಕಾದಿರಿಸಿದ ಜಮೀನಿನಲ್ಲಿ ಗಿಡಗಳನ್ನು ನೆಡುವುದರ ಮೂಲಕ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಸಾಂಕೇತಿಕ ಚಾಲನೆ ನೀಡಿದರು.
ಈ ಸಂದರ್ಭ ಪುತ್ತೂರು ತಾಲೂಕು ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಆಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಪಿಎಂಸಿ ಮಾಜಿ ಅಧ್ಯಕ್ಷ ಬುಡ್ಯಾರ್ ರಾಧಾಕೃಷ್ಣ ರೈ,
ನೆ.ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ರೈ, ಉಪಾಧ್ಯಕ್ಷೆ ಫೌಜಿಯಾ ಇಬ್ರಾಹಿಂ, ಸದಸ್ಯರಾದ ಶ್ರೀರಾಮ ಮೇನಾಲ, ವೆಂಕಪ್ಪ ನಾಯ್ಕ, ಶಶಿಧರ, ಪುತ್ತೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ, ತಾಲೂಕು ಪಂಚಾಯತ್ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕಿ ಶೈಲಜಾ ಭಟ್, ಅರಣ್ಯ ಇಲಾಖೆ ಇಂಜಿನಿಯರ್ ವರ್ಷ, ನರೇಗಾ ಇಂಜಿನಿಯರ್ ವಿನೋದ್ ಕುಮಾರ್, ಟಿಐಇಸಿ ಭರತ್ ರಾಜ್ ಕೆ., ನೆ.ಮೂ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂದೇಶ್, ಕಾರ್ಯದರ್ಶಿ ಕಮಲ್ ರಾಜ್ ಉಪಸ್ಥಿತರಿದ್ದರು.